ಮಂಜೇಶ್ವರ : ಯು.ಡಿ.ಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ನಿನ್ನೆ (ಬುಧವಾರ) ಮಂಗಲ್ಪಾಡಿ ಪಂಚಾಯತ್ ನಲ್ಲಿ ಪರ್ಯಟನೆ ಕೈಗೊಂಡಿದ್ದು, ಬೆಳಗ್ಗೆ ಮುಸೋಡಿಯಿಂದ ಆರಂಭವಾಯಿತು. ಬೆಳಗ್ಗೆಯೇ ಅಭ್ಯರ್ಥಿಯನ್ನು ಸ್ವಾಗತಿಸಲು ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮತದಾರರು ನೆರೆದಿದ್ದರು. ಯುಡಿಎಫ್ ಕಾರ್ಯಕರ್ತರು ಘೋಷಣೆಗಳೊಂದಿಗೆ ಅಭ್ಯರ್ಥಿಯನ್ನು ಸ್ವಾಗತಿಸಿದರು. ಮಣಿಮುಂಡ, ಉಪ್ಪಳ ಗೇಟ್, ಹಿದಾಯತ್ ನಗರ, ಪತ್ವಾಡಿ, ಫಿರ್ದೋಸ್ ನಗರ, ಮಣ್ಣಂಕುಳಿ, ಸೋಂಕಾಲ್, ಬೇಕೂರು, ಕನ್ನಟಿಪಾರೆ, ಸಫಾನಗರ, ಕಲ್ಪಾರ, ಪಚ್ಚಂಬಳ, ಇಚ್ಲಂಗೋಡು, ಅಡ್ಕ, ಬಂದ್ಯೋಡು, ಮುಟ್ಟಂ, ನಯಾಬಜಾರ್, ಚೆರುಗೋಳಿಗಳಲ್ಲಿ ಸಂಚರಿಸಿ ಉಪ್ಪಳದಲ್ಲಿ ಪ್ರಚಾರ ಯಾತ್ರೆ ಮುಕ್ತಾಯವಾಯಿತು.
ಯು.ಡಿ. ಎಫ್ ಮಂಡಲದ ಅಧ್ಯಕ್ಷ ಅಝೀಝ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ.ಮೂಸಾ, ಎಂ.ಅಬ್ಬಾಸ್, ಜೆ.ಎಸ್.ಸೋಮಶೇಖರ್, ಎ.ಕೆ.ಆರಿಫ್, ಲಕ್ಷ್ಮಣ್ ಪ್ರಭು, ಹರ್ಷಾದ್ ವರ್ಕಾಡಿ, ಅಝೀಝ್ ಕಳತ್ತೂರು, ಯು.ಕೆ.ಸೈಫುಲ್ಲಾ ತಂಙಳ್, ಹಾದಿ ತಂಙಳ್, ಡಿ.ಎಂ.ಕೆ.ಮುಹಮ್ಮದ್, ಅಬ್ದುಲ್ಲಾ ಮಜೀದ್. ಇರ್ಫಾನಾ ಇಕ್ಬಾಲ್, ಪಿ.ಎಂ.ಸಲೀಂ, ಶಾಹುಲ್ ಹಮೀದ್ ಬಂದ್ಯೋಡು, ಅಶ್ರಫ್, ರೆಹಮಾನ್, ಹನೀಫ್, ಖಲೀಲ್, ಬಿ.ಎಂ.ಮುಸ್ತಫ, ಮುನೀರ್, ಇಬ್ರಾಹಿಂ ಮೊದಲಾದವರು ವಿವಿಧೆಡೆಗಳಲ್ಲಿ ಮಾತನಾಡಿದರು.

0 Comments