ಪೆರ್ಲ : ಹಿರಿಯ ಬಿಜೆಪಿ ಮುಖಂಡರಾದ ಶೇಣಿ ಬಾಲಕೃಷ್ಣ ನಾಯಕ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ (52) ಇಂದು ಮುಂಜಾನೆ ನಿಧನರಾದರು. ಕಳೆದ ಕೆಲವು ಸಮಯದಿಂದ ಅರ್ಬುದ ರೋಗಕ್ಕೆ ತುತ್ತಾಗಿ ಅಸೌಖ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿ ವಶರಾದರು.
2005ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಶೇಣಿ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರು ಮಕ್ಕಳಾದ ರೂಪ, ದೀಪ,ಪ್ರದೀಪ ಹಾಗೂ ಅಳಿಯಂದಿರನ್ನಗಲಿದ್ದಾರೆ.

0 Comments