Ticker

6/recent/ticker-posts

Ad Code

ಕಾಳ್ಯಂಗಾಡು ಶ್ರೀಮೂಕಾಂಬಿಕಾ ಕ್ಷೇತ್ರ ಪುನರ್ ಪ್ರತಿಷ್ಣಾ ಬ್ರಹ್ಮಕಲಶೋತ್ಸವಕ್ಕೆ ವೈಭವದ ಚಾಲನೆ

 


ಕಾಸರಗೋಡು :  ಕಾಳ್ಯಂಗಾಡು‌ ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು (ರವಿವಾರ) ಬೆಳಿಗ್ಗೆ ಭಜನೆ ಸಂಕೀರ್ತನೆ ಮೂಲಕ ಚಾಲನೆ ನೀಡಲಾಯಿತು.


ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. 



ಬಳಿಕ  ನಡೆದ ಉಗ್ರಾಣ ಮುಹೂರ್ತ ವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು. ಪಾಕ ಪ್ರವೀಣ ಕೆ.ಎನ್.ರಾಮಕೃಷ್ಣ ಹೊಳ್ಳ , ಪ್ರಧಾನ ಅರ್ಚಕ ಯೋಗೀಶ, ಕ್ಷೇತ್ರ ಮೊಕ್ತೇಸರ, ಅಚ್ಚುತ್ತ ಕಾಳ್ಯಂಗಾಡು,  ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ಕಾರ್ಯದರ್ಶಿ ಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ರಘು ಮೀಪುಗುರಿ, ಮೋಹನ್ ರಾಜ್, ಪುಷ್ಪಾವತಿ ಮಹಾಲಿಂಗ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಸಮಿತಿಯಿಂದ ಗೀತಾ ಪಾರಾಯಣ ನಡೆಯಿತು. ವಿವಿಧ ಜನರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವಿ ವಿಧ ಸಮಿತಿ ಪದಾಧಿಕಾರಿಗಳು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಆಹೋರಾತ್ರಿ ಕಾರ್ಯ ನಿರತವಾಗಿದ್ದಾರೆ.ವಿವಿದೆಡೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಕೈಲಾಗುವ ವಸ್ತು,ದೇಣಿಗೆ,ಕಾಣಿಕೆಗಳನ್ನು ನೀಡಿ  ಸಹಕರಿಸುತ್ತಿದ್ದಾರೆ. ಪೇಟೆಯಿಂದ ಅನತಿ ದೂರ ವಿರುವ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಇದೀಗ ಉತ್ಸವದ ಕಳೆ ಮೂಡಿದೆ.

Post a Comment

0 Comments