Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts



Ads Widget

Responsive Advertisement

ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ದತ್ತಿನಿಧಿ ವಿತರಣೆ


ಪೆರ್ಮುದೆ  :  ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ 2026-27 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹೆತ್ತವರಿಗಾಗಿ  ಮಾಹಿತಿ ಕಾರ್ಯಾಗಾರವನ್ನು  ಹಮ್ಮಿಕೊಳ್ಳಲಾಯಿತು. ಕಳೆದ  ಶೈಕ್ಷಣಿಕ ವರ್ಷದ ಎಸ್ಸಸ್ಸೆಲ್ಸಿ  ಪರೀಕ್ಷೆ ಬರೆದ ಎಲ್ಲಾ 240 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶಾಲೆಗೆ ನೂರು ಶೇಕಡಾ ಫಲಿತಾಂಶ ಲಭಿಸಿದೆ. ಈ ಸಂದರ್ಭದಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಒಟ್ಟು 12 ವಿದ್ಯಾರ್ಥಿಗಳಿಗೆ ಹಾಗೂ ಒಂಬತ್ತು ವಿಷಯಗಳಲ್ಲಿ A+ ಪಡೆದ 5 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಲ್ಲದೇ ಆರ್ಥಿಕವಾಗಿ ಹಿಂದುಳಿದ, ಕನ್ನಡ ಮಾಧ್ಯಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ  "ಮೇಪೋಡು ಶ್ರೀ ಸುಬ್ರಾಯ ಮಯ್ಯ" ದತ್ತಿನಿಧಿಯನ್ನು  ಆಯ್ದ  5 ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ  ಈಶ್ವರಿ.ಡಿ ವಿತರಿಸಿದರು. ಪಿ.ಟಿ.ಎ ಅಧ್ಯಕ್ಷ ಅಶೋಕ್ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ "ಅಧ್ಯಾಪಕರ, ಹೆತ್ತವರ ಬೆಂಬಲದಿಂದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು" ಎಂದು ಅಭಿಪಾಯಪಟ್ಟರು.

ಶಾಲಾ‌‌ ಮೇನೇಜರ್ ಶಂಕರನಾರಾಯಣ ಭಟ್ ಗೌರವ ಉಪಸ್ಥಿತರಿದ್ದು ಮಾತನಾಡುತ್ತಾ "ಈ ವರ್ಷ ನೂತನ ಪಠ್ಯಪುಸ್ತಕ ಜಾರಿಯಾಗಿ ಹೊಸ ಪಠ್ಯಕ್ರಮದ ಕಲಿಕೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ" ಎಂದು ಅಭಿಪ್ರಾಯ ಪಟ್ಟರು. ಮುಖ್ಯೋಪಾಧ್ಯಾಯ  ಶಶಿಕುಮಾರ್ ಪಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಪಿ.ಟಿ.ಎ ಅಧ್ಯಕ್ಷೆ  ದಿವ್ಯಾಭಾರತಿ ಶುಭ ಹಾರೈಸಿದರು. ಸೂರ್ಯನಾರಾಯಣ ಭಟ್ ಪ್ರಾರ್ಥಿಸಿದರುಸುನಿತಾ ಕೆ ಸ್ವಾಗತಿಸಿ, ಪ್ರದೀಪ್ ಕೆ ವಂದಿಸಿದರು. ಪ್ರಶಾಂತ ಹೊಳ್ಳ ಎನ್, ನಿರೂಪಿಸಿದರು.

Post a Comment

0 Comments


Ads Widget

Responsive Advertisement
Responsive Advertisement

Responsive Advertisement