ಪೆರ್ಲ : ಎಣ್ಮಕಜೆ ಪಂಚಾಯತ ಮಟ್ಟದ ಶಾಲಾ ಪ್ರವೇಶೋತ್ಸವ ಮತ್ತು ಎಸ್ಸಸ್ಸೆಲ್ಸಿಯಲ್ಲಿ ಎಪ್ಲಸ್ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜೂನ್ 1ಕ್ಕೆ ಶೇಣಿ ಶ್ರೀ ಶಾರದಾಂಬ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಕುಸುಮಾವತಿ ಉದ್ಘಾಟಿಸುವರು. ಪಂಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್, ವಳಮೊಗರು ಸಭೆಯ ಅಧ್ಯಕ್ಷತೆವಹಿಸುವರು.ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ ಎಸ್,, ಬ್ಲಾಕ್ ಪಂ.ಸದಸ್ಯ ಮಿಸ್ರಿಯಾ ಕರೀಂ,ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕೆ,ಪಂ.ಸದಸ್ಯ ಶರತ್ಚಂದ್ರ ಶೆಟ್ಟಿ ಎಂ.ಎಸ್,ಯುಪಿ ಶಾಲಾ ಮುಖ್ಯೋಪಾಧ್ಯಾಯ,ಪಂ.ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಜೆ ಎಸ್, ಶಾಲಾ ಪ್ರಬಂಧಕಿ ಶಾರದ ವೈ,ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಆರ್ ಭಟ್,ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶಾಸ್ತಕುಮಾರ್, ಪಿಇಸಿ ಕಾರ್ಯದರ್ಶಿ ರಾಜೇಶ ಬಿ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ,ಅಬೂಬಕರ್ ಹಾಜಿ ಪೆರ್ದನೆ,ಮಾತೃ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ,ಪ್ರಜ್ವಲಿ,ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಮಹೇಶ್ ಪುಣಿಯೂರು,ಅಬ್ದುಲ್ ಮುಂತರಲಿ ಕೆ.ಮುಖ್ಯೋಪಾಧ್ಯಾಯಿನಿ ಗೀತಾ ಬಿ.ಆರ್. ಮೊದಲಾದವರು ಭಾಗವಹಿಸುವರು.

0 Comments