Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹೈಸ್ಪೀಡ್ ರೈಲು ಮಾರ್ಗ ವಿಸ್ತರಣೆ, ಮೆಡಿಕಲ್ ಕಾಲೇಜು, ತಾಲೂಕು ಕಚೇರಿ ಅಭಿವೃದ್ಧಿಯ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಎಕೆಎಂ ಆಶ್ರಫ್

 

ತಿರುವನಂತಪುರ : ಮಂಜೇಶ್ವರದ ಜನಪ್ರಿಯ ಶಾಸಕ ಎಕೆಎಂ ಆಶ್ರಪ್ ವಿಧಾನ ಸಭೆಯಲ್ಲಿ ಮಂಜೇಶ್ವರ ಮತ್ತು ಕಾಸರಗೋಡಿನ ಅಭಿವೃದ್ಧಿ ಹಕ್ಕುಗಳನ್ನು  ಪ್ರಸ್ತಾಪಿಸುವ ಮೂಲಕ ಗಮನ ಸೆಳೆದರು.

ಯುಡಿಎಫ್ ಸರ್ಕಾರವು ಪರಿಗಣಿಸುತ್ತಿರುವ ಪ್ರಸ್ತಾವಿತ ಹೈಸ್ಪೀಡ್ ರೈಲು ಮಾರ್ಗವನ್ನು ತಿರುವನಂತಪುರದಿಂದ ಕಣ್ಣೂರಿಗೆ ಸೀಮಿತಗೊಳಿಸಬಾರದು; ಅದನ್ನು ಕಾಸರಗೋಡಿಗೂ ಸಂಪರ್ಕಿಸುವುದರೊಂದಿಗೆ ನೆರೆಯ ಮಂಗಳೂರಿಗೂ ವಿಸ್ತರಿಸುವುದು ನಮ್ಮ ಜಿಲ್ಲೆಯ ಅಗತ್ಯವಾಗಿದೆ. ಇದರೊಂದಿಗೆ, ಕಳೆದ 10 ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಮತ್ತು ಮಂಜೇಶ್ವರ ತಾಲ್ಲೂಕು ಕಚೇರಿಯ ನವೀಕರಣಕ್ಕೆ ಯುಡಿಎಫ್ ಸರಕಾರ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಆಡಳಿತದಲ್ಲಿ ಭರವಸೆ ಇರಿಸಲಾಗಿದೆ ಎಂದು ಎಕೆಎಂ ಆಶ್ರಫ್  ಸದನದ ಗಮನಕ್ಕೆ ತಂದರು.

Post a Comment

0 Comments


ಜಾಹೀರಾತು

Responsive Advertisement