Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಕೆಪಿಎ ವೆಸ್ಟ್ ಯೂನಿಟ್ ನಿಂದ ವಿಶ್ವ ರಕ್ತದಾನ ದಿನಾಚರಣೆ

 

ಕಾಸರಗೋಡು :  ಆಲ್ ಕೇರಳ ಫೊಟೊಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯುನಿಟ್ ವತಿಯಿಂದ  ವಿಶ್ವ ರಕ್ತದಾನ ದಿನದಂದು, ಸುಮಾರು 25 ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಯೂನಿಟ್ ಸದಸ್ಯ ಸುಬ್ರಹ್ಮಣ್ಯ ವಿಡಿಯೋನಿಕ್ಸ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಶಾಲು ಹೊದಿಸಿದರು. ಅತಿಥಿಗಳಾಗಿ ಆಗಮಿಸಿದ ಕಾಸರಗೋಡು ನಗರಸಭಾ ಸದಸ್ಯ ರವೀಂದ್ರ ಪೂಜಾರಿ ಇವರು ಸ್ಮರಣಿಕೆ ನೀಡಿ ಗೌರವಿಸಿದರು. ರಕ್ತದಾನ ಶ್ರೇಷ್ಠ ದಾನವಾಗಿದೆ ಒಂದು ಜೀವ ಉಳಿಸುವಲ್ಲಿ ರಕ್ತದ ಬದಲು ರಕ್ತವೇ ನೀಡಬೇಕು ಎಂದರು. ಕಾಸರಗೋಡಿನಲ್ಲಿ ಪ್ರಾರಂಭದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡುತ್ತಿದ್ದ ಆಗಿನ ಕಾಲದ ತಮ್ಮ ಅನುಭವ ಹಾಗೂ ರಕ್ತದಾನದ ಆವಶ್ಯಕತೆ, ಮಹತ್ವವನ್ನು  ವಿವರಿಸಿದರು. 

ಈ ಸಂದರ್ಭದಲ್ಲಿ ಎಕೆಪಿಎ ಜಿಲ್ಲಾ ಸದಸ್ಯ ಮೈಂದಪ್ಪ ಕೆ.ಎಂ, ಜಿಲ್ಲಾ ಜತೆಕಾರ್ಯದರ್ಶಿ ಮನು ಎಲ್ಲೋರ, ಎಕೆಪಿಎ ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ, ಯೂನಿಟ್ ಸದಸ್ಯ ರತೀಶ್ ರಾಮು ಉಪಸ್ಥಿತರಿದ್ದರು. ಕಾರ್ಯದರ್ಶಿ  ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ಯೂನಿಟ್ ಪಿಆರ್ ಒ ವಿನೋದ್ ಕಲ್ಲಂಗೈ ಧನ್ಯವಾದ ನೀಡಿದರು.

Post a Comment

0 Comments


ಜಾಹೀರಾತು

Responsive Advertisement