ಬೆಂಗಳೂರು : ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ಅಮ್ಮ ಜಯಮ್ಮ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವ ಶ್ರೀಮುರಳಿ ಅವರ ಅಪಾರ್ಟ್‌ಮೆಂಟ್‌ನಲ್ಲಿ ಜಯಮ್ಮ ನೆಲೆಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಖ್ಯಾತ ನಿರ್ಮಾಪಕ ಎಸ್ ಎ ಚಿನ್ನೇಗೌಡ ಪತ್ನಿಯಾದ ಜಯಮ್ಮ ಅನಾರೋಗ್ಯ ಕಾರಣದಿಂದ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸ್ವಂತ ಸಹೋದರ ಎಸ್ ಎ ಚಿನ್ನೇಗೌಡ ಇವರ ಧರ್ಮಪತ್ನಿ ಚಿತ್ರ ನಿರ್ಮಾಪಕಿಯಾಗಿದ್ದ ಜಯಮ್ಮ ಪತಿ ಎಸ್ ಎ ಚಿನ್ನೇಗೌಡ ಜೊತೆ ಜಯಮ್ಮ 2006ರಲ್ಲಿ ಮಗ ವಿಜಯ್ ರಾಘವೇಂದ್ರ ನಟನೆಯ ‘ಸೇವಂತಿ ಸೇವಂತಿ’ ಚಿತ್ರವನ್ನ ನಿರ್ಮಿಸಿದ್ದರು. 2008ರಲ್ಲಿ ವಿಜಯ್ ರಾಘವೇಂದ್ರ ಅಭಿನಯದ ಫಣಿ ರಾಮಚಂದ್ರ ನಿರ್ದೇಶನದ ‘ಗಣೇಶ ಮತ್ತೆ ಬಂದ’ ಚಿತ್ರವನ್ನ ಜಯಮ್ಮ ಚಿನ್ನೇಗೌಡ ನಿರ್ಮಿಸಿದ್ದರು.
ಸ್ಟಾರ್ ಕುಟುಂಬದವರಾದ ಜಯಮ್ಮ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳ ಸಿನಿಯಾನಕ್ಕೆ ಸದಾ ಬೆನ್ನೆಲುಬಾಗಿ ನಿಂತಿದ್ದರು. ಪತಿ ಚಿನ್ನೇಗೌಡ ನಿರ್ಮಾಪಕ ಹಾಗೂ ವಿತರಕರಾಗಿ ಗುರುತಿಸಿಕೊಳ್ಳಲು, ಮಕ್ಕಳಾದ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಲು ಪ್ರತಿನಿತ್ಯ ಪ್ರೋತ್ಸಾಹ, ನೈತಿಕ ಬೆಂಬಲ ನೀಡುತ್ತಿದ್ದವರು ಜಯಮ್ಮ. ಜಯಮ್ಮ ಅವರ ಅಗಲಿಕೆಯಿಂದ ಇಡೀ ದೊಡ್ಮನೆ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಕನ್ನಡ ತಾರೆಯರು ಕಂಬನಿ ಮಿಡಿದಿದ್ದಾರೆ.
.png)
0 Comments