ಕಾಸರಗೋಡು : ಬಿಲ್ಲವ ಸೇವಾ ಸಂಘ ಕರಂದಕ್ಕಾಡ್ ಕಾಸರಗೋಡು ಇವರ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ಕರಂದಕ್ಕಾಡ್ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಎಲ್.ಕೆ.ಜಿಯಿಂದ ಪ್ಲಸ್ 2 ವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿತು. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಮಾಜಿ ಡೆಪ್ಯೂಟಿ ತಹಸೀಲ್ದಾರ್ ಚಂದ್ರಕಲಾ ಸಸಿಹಿತ್ಲು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಎಲ್.ಕೆ.ಜಿ ಮಕ್ಕಳಿಗೆ ಪುಸ್ತಕ ವಿತರಣೆಗೆಯ್ಯುವ ಮೂಲಕ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಬಿಲ್ಲವ ಸಂಘದ ಅಧ್ಯಕ್ಷರಾದ ರಘು ಕೆ ಮೀಪುಗುರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ನಗರ ಸಭಾ ಸದಸ್ಯ ಹರೀಶ್ ಕೆ ಆರ್ ಮಾತನಾಡುತ್ತಾ ಸಮಾಜದ ಮಕ್ಕಳು ಪಿ.ಎಸ್.ಸಿ ಪರೀಕ್ಷೆಯ ಕಡೆಗೆ ಗಮನ ನೀಡಿ ಸರಕಾರ ದ ಉನ್ನತ ಹುದ್ದೆಯನ್ನು ಪಡೆಯಲು ಗಮನವಹಿಸಬೇಕೆಂದು ಹೇಳಿದರು. ಗೌರವಾಧ್ಯಕ್ಷರಾದ ಎ ಕೇಶವ ಇವರು ಸಮಾಜವನ್ನು ದೂಷಿಸುವ ಕೆಲವು ವಿದ್ಯಮಾನಗಳು ನಡೆಯುತ್ತಿದ್ದು, ಅದರ ಕಡೆಗೆ ಗಮನ ನೀಡುವಂತೆ ಹಾಗೂ ಮಕ್ಕಳು ದಾರಿ ತಪ್ಪದಂತೆ ಗಮನ ಹರಿಸಬೇಕು ಎಂದರು. ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಸುವರ್ಣ, ಬಿಲ್ಲವ ಮಹಾ ಮಂಡಳಿ ಸದಸ್ಯ ಸುಕೀರ್ತಿ ವರ್ಮಾ ಇವರು ಉಪಸ್ಥಿತರಿದ್ದರು. ಶಮ್ಮಿ ಕುಮಾರ್, ಕಮಲಾಕ್ಷ ಸೂರ್ಲು, ರೋಹಿಣಿ, ಅಶೋಕ್ ಬೀರಂತಬೈಲ್, ಸಂತೋಷ್, ಸತೀಶ್, ಮೈಂದಪ್ಪ, ಇನ್ನಿತರರು ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸ್ವಾಗತಿಸಿ, ಕಮಲಾಕ್ಷ ಸೂರ್ಲು ವಂದಿಸಿದರು. ಪ್ರೇಮ್ ಜಿತ್ ಕಾರ್ಯಕ್ರಮ ನಿರೂಪಿಸಿದರು.


0 Comments