ಮುಳ್ಳೇರಿಯ: ನಿರ್ಜನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಮೂವರನ್ನು ಅಡೂರು ಪೊಲೀಸರು ಬಂಧಿಸಿದ್ದಾರೆ. ಅಡೂರಿನ ಮೂಲಡ್ಕದ ಚನಿಯಾ ನಾಯಕ್ (59), ಅಡೂರಿನ ಸಂತೋಷ್ (37) ಮತ್ತು ಮುಳಿಯಾರ್‌ನ ಇರಿಯಾಣಿ ಕೊಡವಂಚಿಯ ಕೆ. ಮೋಹನನ್ (52) ಅವರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆ 5:30 ರ ಸುಮಾರಿಗೆ ಅಡೂರು ಪೊಲೀಸ್ ಠಾಣಾ ಎಎಸ್‌ಐ ಮಾಧವನ್ ನೇತೃತ್ವದಲ್ಲಿ ಗಸ್ತು ತಿರುಗುತ್ತಿದ್ದಾಗ ಮುಳ್ಳೇರಿಯ ಬಸ್ ನಿಲ್ದಾಣದ ಹಿಂಭಾಗದ ನಿರ್ಜನ ಸ್ಥಳದಲ್ಲಿ ಇಸ್ಪೆಟ್ ಆಡುತ್ತಿದ್ದ ಮೂವರ ಬಂಧನ ನಡೆದಿತ್ತು. ಆಟದ ಸ್ಥಳದಿಂದ 2020 ರೂ.ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

0 Comments