Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೀಮ್ ಪರೀಕ್ಷೆಯಲ್ಲಿ ಪೆರ್ಲ ಬಜಕೂಡ್ಲುವಿನ ಹೇಮಂತ್ ರಾಮ್ ಗೆ ಎಸ್ ಟಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್

 

ತಿರುವನಂತಪುರ : ಕೇರಳ ರಾಜ್ಯದ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಕೀಮ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. 79,717 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. 

ಕೀಮ್ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಪೆರ್ಲ ಬಜಕೂಡ್ಲುವಿನ ಹೇಮಂತ್ ರಾಮ್ ಪಿ.ಎಂ. ಎಸ್ ಟಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಪೆರಿಯ ಸರಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಪುರಂದರ ನಾಯ್ಕ್ ಮತ್ತು  ಶಿಕ್ಷಕಿ ಪೂರ್ಣಿಮಾ ದಂಪತಿ ಪುತ್ರ. ಹೇಮಂತ್ ಬದಿಯಡ್ಕ ಹೋಲಿ ಫ್ಯಾಮಿಲಿ ಕಾನ್ವೆಂಟ್ ಪಬ್ಲಿಕ್ ಸ್ಕೂಲ್ ನಲ್ಲಿ ಹೈಸ್ಕೂಲ್ ಹಾಗೂ ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಈತನ ಸಹೋದರ ಗಗನ್ ರಾಮ್ ಪಿ.ಎಂ. ಭಾರತದ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿರುವ ಐಐಟಿ ಮದ್ರಾಸ್ ನಲ್ಲಿ ಎರಡನೆ ವರ್ಷದ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.

ಅಂಗಮಾಲಿಯ ಅಯ್ಯಂಪುಯ ನಿವಾಸಿ ರೋಷನ್ ರಾಜು ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಜೆಇಇ ಪರೀಕ್ಷೆಯಲ್ಲೂ ರೋಷನ್ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಕಣ್ಣೂರು ಚೆರುವಾಂಚೇರಿಯ ಧ್ಯಾನ್ ತೇಜ್ ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ತ್ರಿಶೂರ್ ಎರವತ್ತೂರಿನ ವಿಸ್ಮಯ ಕೆ.ಆರ್. ಮೂರನೇ ರ‍್ಯಾಂಕ್ ಗಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement