ತಿರುವನಂತಪುರ: ರಾಜ್ಯದಾದ್ಯಂತ ಆರಂಭವಾದ 'ಪ್ರಿಯದರ್ಶಿನಿ' ಉಚಿತ ಬಸ್ ಪ್ರಯಾಣ ಯೋಜನೆ ಉದ್ಘಾಟನೆ ಕೊಲ್ಲಂನಲ್ಲಿ ನಡೆಯುತ್ತಿರುವ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿಸಿ ಪಾಯಸ ಬಿದ್ದ ಆಘಾತಕಾರಿ ಘಟನೆ ನಡೆದಿದೆ.
ಕೊಲ್ಲಂ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ 'ಪ್ರಿಯದರ್ಶಿನಿ' ಉಚಿತ ಬಸ್ ಪ್ರಯಾಣ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಬಸ್ಸಿನ ಸೀಟಿನಲ್ಲಿ ಎಲ್ಲರ ಜತೆ ಕುಳಿತುಕೊಂಡಿದ್ದರು. ಈ ವೇಳೆ, ಸಾರ್ವಜನಿಕರು ಮತ್ತು ಗಣ್ಯರಿಗೆ ಪಾಯಸ ವಿತರಿಸಲು ಯೂತ್ ಕಾಂಗ್ರೆಸ್‌ನಿಂದ ವ್ಯವಸ್ಥೆ ಮಾಡಲಾಗಿತ್ತು. ಭಾರೀ ಜನದಟ್ಟಣೆಯಿಂದ ತುಂಬಿದ್ದ ಉದ್ಘಾಟನಾ ಬಸ್ಸಿನೊಳಗೆ ಪಾಯಸ ವಿತರಿಸುತ್ತಿದ್ದಾಗ ಬಿಸಿ ಪಾಯಸ ಆಕಸ್ಮಿಕವಾಗಿ ಚೆಲ್ಲಿ, ಸಚಿವೆಯ ತಲೆಯ ಮೇಲೆ ಬಿದ್ದಿತ್ತು.
ತಕ್ಷಣ ಸವರಿಸಿಕೊಂಡು ಎದ್ದ ಸಚಿವೆಯನ್ನು ಅಲ್ಲಿದ್ದ ಜನ ಟವೆಲ್ ಹಾಗೂ ಶಾಲು ಬಳಸಿ ತಲೆ ಹಾಗೂ ಮುಖವನ್ನು ಒರೆಸಿದ್ದಾರೆ. ಬಿಸಿಯ ನೋವಿನ ನಡುವೆಯೂ ಸಚಿವೆ ತಾಳ್ಮೆಯಿಂದ ಚಿನ್ನಕ್ಕಡ ತಲುಪುವವರೆಗೆ ಪ್ರಯಾಣಿಸಿ, ನಂತರ ಹಿಂತಿರುಗಿದರು ಎಂದು ತಿಳಿದು ಬಂದಿದೆ.

0 Comments