ಉಪ್ಪಳ: ಕೇರಳ ಸ್ಕೂಲ್ ಟೀಚರ್ಸ್ ಯೂನಿಯನ್ (ಕೆ.ಎಸ್.ಟಿ.ಯು) ಮಂಜೇಶ್ವರ ಉಪಜಿಲ್ಲಾ ಸಮಿತಿಯ ಸದಸ್ಯತ್ವ ಅಭಿಯಾನಕ್ಕೆ ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್ ಅವರು ಚಾಲನೆ ನೀಡಿದರು.
ಉಪಜಿಲ್ಲಾ ಸಮಿತಿ ಅಧ್ಯಕ್ಷ ಅಶ್ರಫ್ ಮರ್ತ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಬೈರ್ ಮಾಸ್ಟರ್, ಉಪಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರಿಫಾ ಟೀಚರ್, ಶಿಹಾಬ್ ಪಿ.ಪಿ, ಆಸಿಫ್ ಚೇರಾಲ್, ಸುಮಯ್ಯ ಟೀಚರ್, ಫಾತಿಮಾ ಟೀಚರ್, ಉಮ್ಮುಕುಲ್ಸು ಟೀಚರ್ ಹಾಗೂ ನಸ್ರುದ್ದೀನ್ ಮಾಸ್ಟರ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

0 Comments