ಪೆರ್ಲ : ಕುರೆಡ್ಕದ ಕೆ.ಪಿ.ಮದನ ಮಾಸ್ಟರ್ ಸ್ಮಾರಕ ಗ್ರಂಥಾಲಯದಲ್ಲಿ ಬಾಲವೇದಿ ವತಿಯಿಂದ ಆಯೋಜಿಸಲಾಗಿದ್ದ ಬಾಲವೇದಿ ಮಕ್ಕಳ ವಾಚನ ಕಳರಿ ಶಿಬಿರದ ಸಮಾರೋಪ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಬಶೀರ್ ಕೊಟ್ಟೂಡಲ್ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಂಥಾಲಯ ಸಮಿತಿ ಅಧ್ಯಕ್ಷ ಹರೀಶ್ ಸೇರಾಜೆ ಅಧ್ಯಕ್ಷತೆವಹಿಸಿದ್ದರು.ಗೋವಿಂದ ಪೈ ಸ್ವಾರಕ ಸರಕಾರಿ ಕಾಲೇಜು ಮಂಜೇಶ್ವರದ ಪ್ರಾಂಶುಪಾಲ ಪ್ರೊ ಡಾ. ಮುಹಮ್ಮದ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಎಣ್ಮಕಜೆ ಪಂ.ಸದಸ್ಯೆ ಸೌದಾಬಿ ಹನೀಫ್, ಪಂಚಾಯತ್ ಲೈಬ್ರರಿ ಕೌನ್ಸಿಲ್ ಸಂಚಾಲಕ ರಾಮಕೃಷ್ಣ ರೈ ಕುದ್ವ ಶುಭಾಶಂಸನೆಗೈದರು. ಸಲಾವುದ್ದೀನ್ ಮಾಸ್ಟರ್ ವರದಿ ಮಂಡಿಸಿದರು. ಮೊಹಮ್ಮದ್ ಹನೀಫ್ ನಡುಬೈಲು, ಗಣೇಶ್ ಮಾಸ್ತರ್ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿಸ್ಕೂಲ್ ಆಫ್ ಡ್ರಾಮಾ ನಟ ಮತ್ತು ನಿರ್ದೇಶಕಪ್ರವೀಣ್ ಕಾಡಗಂ ರಂಗ ಶಿಬಿರದ ತರಗತಿ ನಡೆಸಿದರು. ಬಾಲವೇದಿಯ ಮಕ್ಕಳಿಗೆ ಕಲಿಕೋಪಕರಣ ವಿತರಣೆ ಮತ್ತು ಎಸ್ಸಸ್ಸೆಲ್ಸಿ ಹಾಗೂ ಪ್ಲಸು ಟುವಿನಲ್ಲಿ ಎಪ್ಲಸ್ ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.ನಸೀರ್ ಕುರೆಡ್ಕ ಸ್ವಾಗತಿಸಿ ಗ್ರಂಥ ಪಾಲಕಿ ಶಾರದ ವಂದಿಸಿದರು.


0 Comments