ಕುಂಬ್ಡಾಜೆ : ಪ್ಲಸ್ ಟು ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಪ್ರತಿಭೆಗಳಿಗೆ ಕುಂಬ್ಡಾಜೆ ಮಂಡಲ ಕಾಂಗ್ರೆಸ್ ಸಮಿತಿಯಿಂದ ಅಭಿನಂದನೆ ನಡೆಯಿತು. ಕಾಂಗ್ರೆಸ್ ಕುಂಬ್ಡಾಜೆ ಮಂಡಲ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಆರ್.ಸಿ. ಪ್ರವೀಶ್ಯ ಮತ್ತು ಆಯಿಷತ್ ರಶ್ತಾ ಶೆರಿನ್ ಅವರನ್ನು ಅಭಿನಂದಿಸಲಾಯಿತು.
ಮಂಡಲ ಉಪಾಧ್ಯಕ್ಷ ಸಿದ್ದೀಕ್ ಮುನಿಯೂರು ನೇತೃತ್ವದಲ್ಲಿ ಕಾರಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕರುಣಾಕರನ್ ನಂಬಿಯಾರ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ಯು.ಚೆರುಣಿ, ಪಂಚಾಯತ್ ಮಾಜಿ ಉಪಾಧ್ಯಕ್ಷ ಎಲಿಸಬೇತ್ ಕ್ರಾಸ್ತಾ, ಮಂಡಲ ಸಂಘಟನೆ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಶೆರೀಫ್ ಪುತ್ರಕಳ, ಅನಂತು ರೈ, ಮುಖಂಡರಾದ ಸಿಬಿನ್, ಜೋಜಿ, ಅಬ್ದುಲ್ ಪಾಲಕರ, ರಹಮ್ಮದ್ ಪಾಲಕ್ಕರ್, ರಹಮ್ಮದ್ ಪಾಲಕ್ಕರ್ ಮತ್ತು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.


0 Comments