ಮಂಗಳೂರು : ಮಹಾನಗರ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮಂಗಳೂರಿನ ಬಯೋ ಕೆಮಿಸ್ಟ್ರಿ ವಿಭಾಗದ ಉಪನ್ಯಾಸಕಿ ಸೌಂದರ್ಯ ಕೊಲ್ಲಂಪಾರೆ ಅವರು ಪ್ರಸ್ತುತ ಪಡಿಸಿದ 'ಇವಾಲ್ಯುವೇಶನ್ ಆಫ್ ಹೋಮೋಸಿಸ್ಟೇನ್ ಆಂಡ್ ಸಿಂಗಲ್ ನ್ಯೂಕ್ಲಿಯೊಟೈಡ್ ಪಾಲಿಮಾರ್ಫಿಸಮ್ ಆಫ್ ಫೋಲಿಕ್ ಆಸಿಡ್ ಮೆಟಾಬೋಲಿಸಮ್ ಇನ್ ಕೊರೊನರಿ ಆರ್ಟರಿ ಡಿಸೀಸ್' ಎಂಬ ಮಹಾ ಪ್ರಬಂಧಕ್ಕೆ ಮಣಿಪಾಲ ವಿವಿಯು ಪಿ ಹೆಚ್ ಡಿ ಪದವಿ ನೀಡಿದೆ. ಇವರ ಸಂಶೋಧನೆಗೆ ಮಂಗಳೂರು ಕೆಎಂಸಿ ಬಯೋ ಕೆಮಿಸ್ಟ್ರಿ ವಿಭಾಗದ ಡಾ. ಅನುಪಮ ಹೆಗ್ಡೆ ಮಾರ್ಗದರ್ಶಕರಾಗಿದ್ದರು. ಇವರು ಪಾರ್ವತಿ ಮತ್ತು ನಾರಾಯಣ ಭಟ್ ಎಂಬವರ ಪುತ್ರಿಯಾಗಿದ್ದು, ಡಾ. ಗೌತಮ ಉಪ್ಪಿನೆ ಇವರ ಪತ್ನಿಯಾಗಿದ್ದಾರೆ.

0 Comments