Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನೀರ್ಚಾಲಿನಲ್ಲಿ ಸಮಾಜ ಸೇವಕ ಬಿ.ಯಂ. ಈಶ್ವರ ಸಂಸ್ಮರಣಾ ಕಾರ್ಯಕ್ರಮ : ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ


 ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಸಮಾಜ ಸೇವಕ, ದೀನ ದಲಿತರ  ಆಶಾಕಿರಣ ಬಿ.ಯಂ. ಈಶ್ವರ ಅವರ ಸಂಸ್ಮರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ನೀರ್ಚಾಲಿನಲ್ಲಿ ಜರಗಿತು. ನೀರ್ಚಾಲಿನ ಮೇಲಿನ ಪೇಟೆಯ ದಿ. ಕೃಷ್ಣ ದರ್ಬೆತ್ತಡ್ಕ ವೇದಿಕೆಯ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಗಂಗಾಧರ ಗೋಳಿಯಡ್ಕ ಅವರು ಬಿ.ಯಂ.ಈಶ್ವರ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. 

 ಬಿ.ಯಂ. ಈಶ್ವರ ಅವರ ನಿಕಟವರ್ತಿ, ಸಾಮಾಜಿಕ ಕಾರ್ಯಕರ್ತ ಕೃಷ್ಣನ್ ಕುಟ್ಟಿ ಸಂಸ್ಮರಣಾ ಭಾಷಣ ಮಾಡಿದರು. ಸಾಹಿತಿ ರಾಧಾಕೃಷ್ಣ.ಕೆ. ಉಳಿಯತ್ತಡ್ಕ ಬಿ.ಯಂ.ಈಶ್ವರ ಅವರೊಂದಿಗಿನ ನಿಡುಗಾಲದ ಸಂಬಂಧವನ್ನು ಸ್ಮರಿಸಿದರು. ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷ ವಸಂತ ಅಜಕ್ಕೋಡು, ನಿಟ್ಟೋಣಿ ಬಂದ್ಯೋಡು, ರಾಮಚಂದ್ರ ಮಾರ್ಪನಡ್ಕ, ಪದ್ಮನಾಭ ಚೇನೆಕೋಡು, ಗೋಪಾಲ ದರ್ಬೆತ್ತಡ್ಕ, ಬಾಲಚಂದ್ರ. ಬಿ.ಯಂ ಮಾತನಾಡಿದರು. 

ಬಿ.ಯಂ.ಈಶ್ವರ ಅವರ ಸ್ಮರಣಾರ್ಥ ಅವರ ಮಕ್ಕಳು ಕೊಡಮಾಡುವ ನಗದು ಸಹಿತ ಪ್ರತಿಭಾ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸುರೇಶ ಅಜಕ್ಕೋಡು, ಗೋಪಾಲಕೃಷ್ಣ.ಬಿ.ಯಂ, ಸುಧಾಕರ ಬೆಳ್ಳಿಗೆ, ತುಕ್ರ ಪೆರ್ಮುದೆ ಮೊದಲಾದವರು ಉಪಸ್ಥಿತರಿದ್ದರು. ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸ್ವಾಗತಿಸಿ, ಕಾರ್ಯದರ್ಶಿ ಸುಂದರ ಬಾರಡ್ಕ ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement