Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜೇಶ್ಚರದ ಗಡಿಭಾಗಗಳಲ್ಲಿ ಕೇರಳ ಸರಕಾರಿ ಶಾಲೆಯ ಬಗ್ಗೆ ಅಪಪ್ರಚಾರ : ಈ ದುರುದ್ದೇಶದ ಹಿಂದೆ ಖಾಸಗಿ ಶಾಲಾ ಲಾಬಿ ಆರೋಪ

 

ಮಂಜೇಶ್ವರ: ಕಳೆದ ಎರಡು ದಶಕಗಳಿಂದ ಕಾಸರಗೋಡು ಜಿಲ್ಲೆಯ ಅತ್ಯುತ್ತಮ ಸಾರ್ವಜನಿಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಜೇಶ್ವರದ ಶಾಲೆಯೊಂದರ ಹೆಸರಿಗೆ ಕಳಂಕವನ್ನು ತರುವ ನಿಟ್ಟಿನಲ್ಲಿ ಕಳೆದ ಕೆಲವಾರು ವರ್ಷಗಳಿಂದ ಕೆಲವೊಂದು ಕಾಣದ ಕೈಗಳು ನಿರಂತರವಾದ ಶ್ರಮ ನಡೆಸುತ್ತಿದ್ದು ಕೆಲವು ದಿನಗಳ ಹಿಂದೆಯೂ ಪತ್ರಿಕೆಗಳಲ್ಲಿ, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಾರ್ತೆಗಳು ಹರಡುತ್ತಿರುವುದು ಕಂಡು ಬರುತ್ತಿದೆ. 

ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಅತ್ಯುತ್ತಮವಾದ ಸಾಧನೆಗಳನ್ನು ಮಾಡುತ್ತಾ ಬಂದಿರುವ ಈ ಶಾಲೆಯ ವಿದ್ಯಾರ್ಥಿಗಳು ಉಪಜಿಲ್ಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರತಿಭೆಗಳಾಗಿ ಮಿಂಚುತ್ತಿರುವುದು ಹೆಮ್ಮೆಯ ವಿಚಾರ. ಕಳೆದ ಐದು ವರ್ಷಗಳಿಂದ ಎಸ್‌. ಎಸ್.ಎಲ್‌.ಸಿ ಪರೀಕ್ಷೆಗಳಲ್ಲಿ ಶೇ. 100 ರಷ್ಟು ಯಶಸ್ಸನ್ನು ಸಾಧಿಸುತ್ತಾ ಬಂದಿರುವ ಈ ಶಾಲೆಯಲ್ಲಿ ಪ್ರತಿ ವರ್ಷ ಶಾಲಾ ಅಧಿಕಾರಿಗಳು ಸ್ಥಳಾವಕಾಶದ ಕೊರತೆಯಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ನಿಲ್ಲಿಸುವುದನ್ನು ಪರಿಗಣಿಸಿದಾಗ, ಶಾಲೆಯನ್ನು ಕೀಳಾಗಿ ಕಾಣುವ ಈ ರೀತಿಯ ಅನಾಮಧೇಯ ಸುದ್ದಿಗಳು ಆಧಾರರಹಿತವಾಗಿದ್ದು ಇಂತಹ ದುಷ್ಕೃತ್ಯಗಳು ಈ ಹಿಂದೆಯೂ ನಡೆದಿವೆ ಎಂಬುದು ವಾಸ್ತವ. ಇದೆಲ್ಲವೂ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ, ಸಾರ್ವಜನಿಕ ಶಾಲೆಗಳಿಗೆ ಪ್ರವೇಶಿಸುವ ಮಕ್ಕಳನ್ನು ಮತ್ತು ಹೆತ್ತವರನ್ನು ಉದ್ದೇಶಪೂರ್ವಕವಾಗಿ ಗೊಂದಲಕ್ಕೀಡುಮಾಡಲಿರುವ ತಂತ್ರ ಎಂಬುದರಲ್ಲಿ ಸಂಶಯವಿಲ್ಲ. ಇಂತಹ ಸುಳ್ಳು ಸುದ್ದಿಗಳ ಹಿಂದೆ ಕೇರಳ, ಕರ್ನಾಟಕ ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲಾ ಲಾಬಿ ಇದೆ ಎಂದು ಸ್ಥಳೀಯ ನಿವಾಸಿಗಳು ಶಂಕಿಸಿದ್ದಾರೆ. ಆಧಾರರಹಿತ ಸುದ್ದಿಗಳನ್ನು ಹರಡುವವರ ವಿರುದ್ಧ ಸ್ಥಳೀಯರ ಆಕ್ರೋಶ ತೀವ್ರವಾಗಿದೆ.

Post a Comment

0 Comments


ಜಾಹೀರಾತು

Responsive Advertisement