Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲ ಸ.ನಾ‌.ಎಲ್.ಪಿ.ಶಾಲೆಗೆ ಪ್ರವೇಶೋತ್ಸವ ದಿನ ಜಾರುಬಂಡಿಯ ಕೊಡುಗೆಯನ್ನಿತ್ತ ರೂವಾರಿಗಳಿಗೆ ಸನ್ಮಾನ

 

ಪೆರ್ಲ : ಎಲ್ಲೆಡೆ ಶಾಲಾ ಪ್ರವೇಶೋತ್ಸವ ಸಂಭ್ರಮ ಮನೆ ಮಾಡಿರುವ ನಡುವೆ ಪೆರ್ಲ ಸತ್ಯನಾರಾಯಣ ಎಎಲ್ ಪಿ ಶಾಲಾ ಆವರಣದಲ್ಲಿ  ಸುಂದರವಾದ ಜಾರುಬಂಡಿಯೊಂದನ್ನು ನಿರ್ಮಿಸಿ ಕೊಡುಗೆ ನೀಡಿದ  ರೂವಾರಿಗಳನ್ನು ಸನ್ಮಾನಿಸಲಾಯಿತು. ಈ ವರ್ಷದ ಶಾಲಾ ಪ್ರವೇಶೋತ್ಸವ ನಡೆಯುವಾಗ ಕಳೆದ ರಕ್ಷಕ ಶಿಕ್ಷಕ‌ ಸಂಘದ ಅಧ್ಯಕ್ಷರಾದ ರಾಜೇಶ್ ಪೂಜಾರಿ‌ ಬಜಕೂಡ್ಲು, ಪದಾಧಿಕಾರಿಗಳಾದ ನವೀನ್ ಕುಮಾರ್ ನಾಯಕ್ ಉಕ್ಕಿನಡ್ಕ, ಅರುಣ್ ಕುಮಾರ್ ಖಂಡಿಗೆ ಇವರನ್ನು‌ ಅಭಿನಂದಿಸಲಾಯಿತು. ಈ ದಿನ ನಡೆದ ಶಾಲಾ ಪ್ರವೇಶೋತ್ಸವ ಸಂದರ್ಭದಲ್ಲಿ ಜಾರುಬಂಡಿಯನ್ನು ಸಾಮಾಜಿಕ ಮುಂದಾಳು ಸದಾಶಿವ ಭಟ್ ಹರಿನಿಲಯ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಉಪಸ್ಥಿತರಿದ್ದರು. ಶಾಲಾ ಪಿಟಿಎ ಚಟುವಟಿಕೆಗಳಲ್ಲಿ ಉಳಿದ ಹಣದ ಜತೆಗೆ ತಮ್ಮ ಕೈಯಿಂದ ಒಂದಷ್ಟು ಹಣ ವ್ಯಯಿಸಿ ಶಾಲಾ ಅಂಗಣದೊಳಗೊಂದು ಸುಂದರ ಜಾರುಬಂಡಿ ನಿರ್ಮಿಸಿ ಮಕ್ಕಳಿಗೆ ಕೊಡುಗೆಯಾಗಿಸಲು ನಿರ್ಧರಿಸಿದ ಇವರ ಯೋಜನೆ ಇದೀಗ  ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿದೆ.

Post a Comment

0 Comments


ಜಾಹೀರಾತು

Responsive Advertisement