Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲದ ವಿವೇಕಾನಂದ ಶಿಶು ಮಂದಿರದಲ್ಲಿ ನವಾಗತರಾದ ಮಕ್ಕಳಿಗೆ ಆರತಿ ಬೆಳಗಿ ಸಾಂಪ್ರದಾಯಿಕ ಸ್ವಾಗತದೊಂದಿಗೆ ಪ್ರವೇಶೋತ್ಸವ

ಪೆರ್ಲ :  ನಾಲಂದಾ ಕಾಲೇಜಿನ ಸಮೀಪವಿರುವ ವಿವೇಕಾನಂದ ಶಿಶು ಮಂದಿರದಲ್ಲಿ ಪ್ರವೇಶೋತ್ಸವವು ಜರಗಿತು. ನವಾಗತರಾದ ಪುಟಾಣಿಗಳನ್ನು ಸನಾತನ ಸಂಪ್ರದಾಯದ 'ಮಕ್ಕಳೇ ದೇವರೆಂಬ‌‌' ಭಾವದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತೃ ಮಂಡಳಿ ಅಧ್ಯಕ್ಷೆ ಶ್ವೇತಾ ನೇರೋಳು ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಂದಿನಲ್ಲೇ ಭಾರತೀಯ ಸಂಸ್ಕೃತಿಯನ್ನು ಕಲಿಸುವ ಮೂಲಕ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಬೆಳೆಯಲು ಶಿಶು ಮಂದಿರ ಸಹಕಾರಿಯಾಗಿದೆಯೆಂದು ಅವರು ನಲ್ನುಡಿದರು. ಶಿಶು ಮಂದಿರ ಖಜಾಂಜಿ ಜಯಶ್ರೀ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೇಖಾ ಮಾತಾಜಿ ಶಿಶು ಮಂದಿರದ ನಿಯಮಗಳ ಬಗ್ಗೆ ತಿಳಿಸಿದರು. ವೈಷ್ಣವಿ ಸಿ. ಸ್ವಾಗತಿಸಿ, ಶ್ರೇಷ್ಠಾ ಪಿ. ಜಿ. ಧನ್ಯವಾದವಿತ್ತರು. ನಂತರ ಸಿಹಿ ತಿಂಡಿ ವಿತರಿಸಲಾಯಿತು.

Post a Comment

0 Comments


ಜಾಹೀರಾತು

Responsive Advertisement