Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪಾರಂಪರಿಕ ಹಳ್ಳಕ್ಕೆ ಮಣ್ಣು ತುಂಬಿಸಿ ಖಾಸಗಿ ವ್ಯಕ್ತಿಯಿಂದ ಕಟ್ಟಡ ನಿರ್ಮಾಣಕ್ಕೆ ಯತ್ನ : ಸ್ಥಳೀಯರಿಂದ ವ್ಯಾಪಕ ಖಂಡನೆ

 

ನೀರ್ಚಾಲು : ಖಾಸಗಿ ವ್ಯಕ್ತಿಯೊಬ್ಬರು  ಪಾರಂಪರಿಕ ಹಳ್ಳವೊಂದಕ್ಕೆ ಮಣ್ಣು ತುಂಬಿಸಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪ್ರಯತ್ನಿಸುತ್ತಿದ್ದು, ಸ್ಥಳೀಯರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಬದಿಯಡ್ಕ ಗ್ರಾ.ಪಂ.ನ ಬೇಳ ಕಿಳಿಂಗಾರು ರಸ್ತೆಯ ಬಂಡ್ರಡ್ಕದಲ್ಲಿ ಈ ಘಟನೆ ನಡೆದಿರುವುದಾಗಿ ದೂರಲಾಗಿದೆ. ದಶಕಗಳ ಹಿಂದೆ ಈ ಸರ್ಕಾರಿ ಸ್ಥಳದ ಸುತ್ತ ಅವರಣ ಗೋಡೆ ನಿರ್ಮಿಸಿ ಖಾಸಗಿ ವ್ಯಕ್ತಿಯೊಬ್ಬರು   ಅತಿಕ್ರಮಿಸಲು ಪ್ರಯತ್ನಿಸಿದ್ದಾರೆ. ಹಳ್ಖದ ನೀರನ್ನು  ಈ ಪ್ರದೇಶದ ಮಹಿಳೆಯರು ವರ್ಷಗಳಿಂದ ಬಟ್ಟೆ ಒಗೆಯಲು ಮತ್ತು ವಾಹನಗಳನ್ನು ತೊಳೆಯಲು ಬಳಸುತ್ತಿದ್ದಾರೆ. ಹಲವು ಸಮಯಗಳಿಂದ ಜಾನುವಾರು ಮೊದಲಾದ ಪ್ರಾಣಿಗಳು ಈ ಹಳ್ಳದ ನೀರನ್ನು ಕುಡಿಯುತ್ತಿದ್ದು ಮಾರ್ಚ್ ತಿಂಗಳ ಅಂತ್ಯದವರೆಗೆ ಈ ಹಳ್ಳದಲ್ಲಿ ನೀರಿನ ಒರತೆ ಸಮೃದ್ಧವಾಗಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗೆ ಬಹೂಪಯೋಗಿಯಾಗಿರುವ ಹಳ್ಳವನ್ನು ಖಾಸಗಿ ವ್ಯಕ್ತಿಯೊಬ್ಬರು ನಾಶಪಡಿಸುವ ವಿರುದ್ಧ ಸ್ಥಳೀಯ ನಿವಾಸಿಗಳು   ಪ್ರತಿಭಟಿಸಲು ಮುಂದಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ, ಬೇಳ ಗ್ರಾಮಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ. ನಿರ್ಮಾಣ ಕಾರ್ಯವನ್ನು ನಿಲ್ಲಿಸದಿದ್ದರೆ ತೀವ್ರ ಆಂದೋಲನ ನಡೆಸುವುದಾಗಿ ನಾಗರಿಕರು ಎಚ್ಚರಿಸಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement