ಪೆರ್ಲ : ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರಿ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ವಸತಿ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹಗಲು ರಾತ್ರಿ ಮುಷ್ಕರ ಸೋಮವಾರ ಬೆಳಗ್ಗಿನಿಂದ ಆರಂಭಗೊಂಡಿದ್ದು ಎರಡನೇ ದಿನವಾದ ಇಂದು ವಿದ್ಯಾರ್ಥಿ ಸಂಘಟನೆಯಾದ ಎಸ್ ಎಫ್ ಐ ಸರ್ವ ರೀತಿಯ ಬೆಂಬಲ ಸೂಚಿಸುವುದರೊಂದಿಗೆ ಹೋರಾಟಕ್ಕೆ ಇನ್ನಷ್ಟು ಬಿಸಿ ಏರಿದೆ
ಮೆಡಿಕಲ್ ಕಾಲೇಜು ಮುಂಭಾಗ ನರ್ಸಿಂಗ್ ವಿದ್ಯಾರ್ಥಿಗಳ ಮುಷ್ಕರ ನಡೆಯುವಲ್ಲಿಗೆ ಎಸ್ ಎಫ್ ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಘೋಷಣೆಗಳೊಂದಿಗೆ ಆಗಮಿಸಿದ ವಿದ್ಯಾರ್ಥಿ ಸಂಘಟನೆ ಬೆಂಬಲ ಸೂಚಿಸಿದೆ. ಎಸ್ ಎಫ್ ಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ. ಅನುರಾಗ್, ಅದಿನಾನ್, ದಯಾನಂದ, ಅನುರಾಜ್, ಸಜೇಶ್, ಅಭಿಚಂದ್, ರೋಶಿನಿ ಮೊದಲಾದವರು ಭಾಗವಹಿಸಿದರು.
ಇದೇ ವೇಳೆ ಎಸ್ ಎಫ್ ಐ ಜಿಲ್ಲಾ ನೇತಾರರು ಮೆಡಿಕಲ್ ಕಾಲೇಜ್ ಸೂಪರಿಡೆಂಟ್ ಜತೆ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಬಲಪಡಿಸುವುದಾಗಿ ಎಸ್ ಎಫ್ ಐ ಪದಾಧಿಕಾರಿಗಳು ತಿಳಿಸಿದ್ದಾರೆ.

0 Comments