ಪೆರ್ಲ : ಎಣ್ಮಕಜೆ ಪಂಚಾಯತಿ ಮಟ್ಟದ ಶಾಲಾ ಪ್ರವೇಶೋತ್ಸವ ಮತ್ತು ಎಸ್ಸಸ್ಸೆಲ್ಸಿಯಲ್ಲಿ ಎಪ್ಲಸ್ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಶೇಣಿ ಶ್ರೀ ಶಾರದಾಂಬ ಶಾಲೆಯ ನೂತನ ಸಭಾಂಗಣದಲ್ಲಿ ನಡೆಯಿತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಕುಸುಮಾವತಿ ಕಾರ್ಯಕ್ರಮ ಉದ್ಘಾಟಿಸಿದರು. ಪಂಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್, ವಳಮೊಗರು ಸಭೆಯ ಅಧ್ಯಕ್ಷತೆವಹಿಸಿದ್ದರು. ಬ್ಲಾಕ್ ಪಂ.ಸದಸ್ಯ ಮಿಸ್ರಿಯಾ ಕರೀಂ, ಪಂ.ಸದಸ್ಯ ಶರತ್ಚಂದ್ರ ಶೆಟ್ಟಿ ಎಂ.ಎಸ್, ಶಾಲಾ ಪ್ರಬಂಧಕಿ ಶಾರದ ವೈ,ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಆರ್ ಭಟ್, ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶಾಸ್ತಕುಮಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ,ಅಬೂಬಕರ್ ಹಾಜಿ ಪೆರ್ದನೆ, ಮಾತೃ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ಪ್ರಜ್ವಲಿ, ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಮಹೇಶ್ ಪುಣಿಯೂರು ಮೊದಲಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿಎಂ ಕಿಡ್ಸ್ ಸ್ಕಾಲರ್ ಶೀಫ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಯುಪಿ ವಿಭಾಗದ ಆಯಿಷತ್ ಇಹಾ ಕಲ್ಲಿಕಟ್ಟೆ ಹಾಗೂ ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ ಎಪ್ಲಸ್ ಗಳಿಸಿದ 12 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹೊಸದಾಗಿ ಪ್ರಥಮ ತರಗತಿಗಳಿಗೆ ಸೇರ್ಪಡೆಯಾದ ಮಕ್ಕಳಿಗೆ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಬ್ಯಾಗ್ ವಿತರಿಸಲಾಯಿತು. ಉದ್ಯಮಿ ಶಂಕರ ಪಾಟಾಳಿ - ಗೀತಾ ದಂಪತಿಗಳ ಪ್ರಾಯೋಜಕತ್ವದಲ್ಲಿ ಸಿಹಿತಿಂಡಿ ಹಂಚಲಾಯಿತು. ಯುಪಿ ಶಾಲಾ ಮುಖ್ಯೋಪಾಧ್ಯಾಯ ಹಾಗೂ ಪಂ.ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಜೆ ಎಸ್ ಸ್ವಾಗತಿಸಿ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಗೀತಾ ಬಿ.ಆರ್.ವಂದಿಸಿದರು. ಶ್ರೀಧರ್ ಮಾಸ್ತರ್ ಕುಕ್ಕಿಲ ನಿರೂಪಿಸಿದರು.

0 Comments