Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

16ನೇ ವಿಧಾನಸಭೆಯ ಉಪಸಭಾಪತಿಯಾಗಿ ಶಾನಿಮೋಲ್ ಉಸ್ಮಾನ್ ಆಯ್ಕೆ

ತಿರುವನಂತಪುರ : 16ನೇ ವಿಧಾನಸಭೆಯ ಉಪಸಭಾಪತಿಯಾಗಿ ಶಾನಿಮೋಲ್ ಉಸ್ಮಾನ್ ಆಯ್ಕೆಯಾದರು.  ಉಪಸಭಾಪತಿ ಹುದ್ದೆಗೆ ಶಾನಿಮೋಲ್ ಉಸ್ಮಾನ್ ಮತ್ತು ಸಿಪಿಐನ ಮುಹಮ್ಮದ್ ಮೊಹ್ಸಿನ್ ನಡುವೆ ಸ್ಪರ್ಧೆ ನಡೆಯಿತು. ಮುಹಮ್ಮದ್ ಮೊಹ್ಸಿನ್ 34 ಮತಗಳನ್ನು ಪಡೆದಾಗ ಶಾನಿಮೋಲ್ ಉಸ್ಮಾನ್ 99 ಮತಗಳನ್ನು ಪಡೆದು ಉಪಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಮೂರು ದಶಕಗಳ ಬಳಿಕ  ಕೇರಳ ವಿಧಾನಸಭೆಗೆ ಮಹಿಳಾ ಉಪಸಭಾಪತಿ ಆಯ್ಕೆಯಾಗುತ್ತಿದ್ದಾರೆ. ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಶಾನಿಮೋಲ್ ಉಸ್ಮಾನ್ ನಾಲ್ಕನೇ ಮಹಿಳಾ ಉಪಸಭಾಪತಿಯಾಗಿದ್ದಾರೆ. 

ಚುನಾವಣೆಯಲ್ಲಿ ಸ್ಪೀಕರ್ ತಿರುವಂಚೂರು ರಾಧಾಕೃಷ್ಣನ್ ಮತ ಚಲಾಯಿಸಲಿಲ್ಲ. ಮೂವರು ಬಿಜೆಪಿ ಸದಸ್ಯರು ಮತದಾನದಿಂದ ದೂರ ಉಳಿದರು. ಇಬ್ಬರು ಯುಡಿಎಫ್ ಶಾಸಕರು ಮತ್ತು ಒಬ್ಬ ಎಲ್‌ಡಿಎಫ್ ಸದಸ್ಯರು ವಿಧಾನಸಭೆಯಲ್ಲಿ ಇರಲಿಲ್ಲ 

Post a Comment

0 Comments


ಜಾಹೀರಾತು

Responsive Advertisement