Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹತ್ತನೇ ತರಗತಿ ವಿದ್ಯಾರ್ಥಿನಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.


ಪುತ್ತೂರು: ಶಾಲೆಗೆ ಹೋಗಲು ಅಣಿಯಾದ ವಿದ್ಯಾರ್ಥಿನಿಯೋರ್ವಳ ಮೃತದೇಹ ಮನೆಯ ಮಲಗುವ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬೆಳ್ತಂಗಡಿ ಸಮೀಪದ ಉಜಿರೆ ಶಿವಾಜಿ ನಗರ ನಿವಾಸಿ, ಹತ್ತನೇ ತರಗತಿ ವಿದ್ಯಾರ್ಥಿನಿ ಜೇಷ್ಠ ಆಚಾರ್ಯ (15)  ಮೃತ ವಿದ್ಯಾರ್ಥಿನಿ ಎಂದು ಪತ್ತೆ ಹಚ್ಚಲಾಗಿದೆ.

 ಚಿನ್ನದ ಕುಸುರಿ ಕೆಲಸ ಮಾಡುವ ರಾಘವ ಆಚಾರ್ಯ - ಚಂದ್ರಕಲಾ ದಂಪತಿಗಳ ಸುಪುತ್ರಿಯಾಗಿರುವ ಜೇಷ್ಠ ಆಚಾರ್ಯ, ಶಾಲಾರಂಭವಾದ ನಿನ್ನೆ ಉಜಿರೆಯ ಎಸ್.ಡಿ.ಎಂ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿಗೆ ಹಾಜರಾಗಲು ತಯಾರಿ ನಡೆಸುತ್ತಿರುವ ಮಧ್ಯೆ ಬೆಳಗ್ಗೆ 8.30 ಕ್ಕೆ ಯುನಿಫಾರ್ಮ್ ಧರಿಸಲು ಬೆಡ್ ರೂಮ್ ಗೆ ತೆರಳಿದ್ದಳು. ತಡವಾದರೂ ಮಗಳು ಕೋಣೆಯಿಂದ ಬರದನ್ನ ಗಮನಿಸಿದ ಹೆತ್ತವರು ಬಾಗಿಲು ಬಡಿದರೂ ಯಾವುದೇ ಪ್ರತ್ಯುತ್ತರ ದೊರಕದ ಕಾರಣ, ಕಿಟಿಕಿಯಿಂದ ನೋಡಿದಾಗ ಸೀರೆಯಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಸ್ಥಳೀಯರ ನೆರವಿನೊಂದಿಗೆ ಬಾಗಿಲು ಮುರಿದು, ಜೇಷ್ಠಳನ್ನು ಕುಣಿಕೆಯಿಂದ ಕೆಳಗಿಳಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾಳೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಜೇಷ್ಠ ನೇಣು ಬಿಗಿಯಲು ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ಮನೆಯವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,

ಪೋಷಕರ ದೂರಿನನ್ವಯ ಬೆಳ್ತಂಗಡಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದು, ಇಂದು ಬೆಳಗ್ಗೆ ಮನೆಗೆ ತರಲಾಯಿತು. ಬಳಿಕ ಉಜಿರೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

Post a Comment

0 Comments


ಜಾಹೀರಾತು

Responsive Advertisement