ಬದಿಯಡ್ಕ : ಅನುದಾನಿತ ಹಿರಿಯ ಬುನಾದಿ ಶಾಲೆ, ಕುಂಟಿಕಾನದ ಶಾಲಾ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ವಾರ್ಡು ಸದಸ್ಯೆ ಅನ್ನತ್ ಬೀವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಮರುದ್ದೀನ್ ಪಾಡ್ಲಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಳೀಯ ವಾರ್ಡ್ ಸದಸ್ಯ ಶ್ಯಾಮ್ ಪ್ರಸಾದ ಸರಳಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ, ಎಂ ಪಿ ಟಿಎ ಅಧ್ಯಕ್ಷೆ ಆಶಾ ಮೋಳ್, ಸ್ಟಾಫ್ ಸೆಕ್ರೆಟರಿ ಸುಭಾಷ್ ಇ ಕೆ, ನಿವೃತ್ತ ಹಿಂದಿ ಅಧ್ಯಾಪಿಕೆ ಮೂಕಾಂಬಿಕಾ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನವಾಗತ ಮಕ್ಕಳಿಗೆ ಬ್ಯಾಗ್ ಪುಸ್ತಕ ಹಾಗೂ ಇನ್ನಿತರ ಕಿಟ್ ನೀಡಿ ಸ್ವಾಗತಿಸಲಾಯಿತು. ಅಧ್ಯಾಪಕ ಸಲಾಂ ಮಾಸ್ಟರ್ ರಕ್ಷಕರಿಗೆ ವಿಶೇಷ ತರಗತಿಯನ್ನು ನಡೆಸಿಕೊಟ್ಟರು. ಆಧ್ಯಾಪಿಕೆ ಅಖಿಲ ಲಕ್ಷ್ಮಿ ಪ್ರಾರ್ಥನೆ
ಹಾಡಿದರು. ಮುಖ್ಯ ಶಿಕ್ಷಕರಾದ ಪ್ರಶಾಂತ ಕುಮಾರ್ ಕೆ ಸ್ವಾಗತಿಸಿ ಅಧ್ಯಾಪಕ ತಿರುಮಲೇಶ್ವರ ಎ ವಂದಿಸಿದರು.ಎಸ್ ಆರ್ ಜಿ ಕನ್ವೀನರ್ ಶರತ್ ಕುಮಾರ್ ನಿರೂಪಿಸಿದರು

0 Comments