Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೆದ್ರಂಪಳ್ಳದ ಪರಿಶ್ರಮ ಗಾರ್ಡನ್ಸ್ ನಲ್ಲಿ ಆಷಾಢ ಸಾಹಿತ್ಯ ಸಂಭ್ರಮ

ಪೆರ್ಲ :  ಸವಿಹೃದಯದ ಕವಿಮಿತ್ರರು ಸಂಘಟನೆಯ ವತಿಯಿಂದ ಸುಭಾಷ್ ಪೆರ್ಲ ಅವರ ನೇತೃತ್ವದಲ್ಲಿ ಬೆದ್ರಂಪಳ್ಳ ಪರಿಶ್ರಮ ಗಾರ್ಡನ್ಸ್ ನಲ್ಲಿ  'ಆಷಾಢ ಸಾಹಿತ್ಯ ಸಂಭ್ರಮ' ಕಾರ್ಯಕ್ರಮ ಭಾನುವಾರ ನಡೆಯಿತು. 

ಆಟಿ ಕಳೆಂಜ ಕುಣಿತ ನಡೆದು ಸಾಂಪ್ರದಾಯಿಕ ಶೈಲಿಯಲ್ಲಿ ಕಾಣಿಕೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ರಮೇಶ್ ಬಾಯಾರು ಉದ್ಘಾಟಿಸಿದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಪುಷ್ಪಾ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ವೆಂಕಟಭಟ್ ಎಡನೀರು ಅವರ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು  ಬಾಲಕೃಷ್ಣ ನಾಯ್ಕ್ ಏಳ್ಕಾನ ಉದ್ಘಾಟಿಸಿದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ವಾಂತಿಚ್ಚಾಲು ಆಟಿ ಸಂಪ್ರದಾಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಪತ್ರಕರ್ತ, ಯಕ್ಷಗಾನ ಕಲಾವಿದ ವಿ.ಜಿ.ಕಾಸರಗೋಡು ಮುಖ್ಯ ಅತಿಥಿಯಾಗಿದ್ದರು. ಹಿರಿಯ ಸಾಹಿತಿ ಹರೀಶ್ ಪೆರ್ಲ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಣ್ಮಕಜೆ ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆಯಾಗಿ ಚುನಾಯಿತರಾದ ನವೀನ ಕುಮಾರಿ ಅವರನ್ನು ಅಭಿನಂದಿಸಲಾಯಿತು. ವೆಂಕಟಭಟ್ ಎಡನೀರು ಸ್ವಾಗತಿಸಿ, ಸುಭಾಷ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಜಯಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.  ಶ್ರೀ ದುರ್ಗಾ ಮೆಲೋಡಿಸ್ ಮಣಿಯಂಪಾರೆಯ ಜಯಪ್ರಕಾಶ್ ಮಣಿಯಂಪಾರೆ  ಹಾಗೂ ಬಳಗದವರಿಂದ ಆಷಾಢ ಕಾವ್ಯ ಗಾನ ನಡೆಯಿತು. 

ಬಳಿಕ  ಸಾಹಿತಿ, ವಿಮರ್ಶಕರಾದ  ಸುಂದರ ಭಟ್ ರ ಅಧ್ಯಕ್ಷತೆಯಲ್ಲಿ 'ಆಷಾಢ ಕವಿ ಸಮಯ' ಎಂಬ ಕವಿಗೋಷ್ಠಿ ನಡೆಯಿತು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಕವಿಗೋಷ್ಠಿಗೆ ಚಾಲನೆ ನೀಡಿದರು. ಪವಿತ್ರ ಜೆ.ಪಿ ಮಣಿಯಂಪಾರೆ ಸ್ವಾಗತಿಸಿದರು. ಕವಯಿತ್ರಿ ಕುಮಾರಿ ಹರ್ಷಿತಾ ಪಳ್ಳಕಾನ ನಿರೂಪಿಸಿದರು.ಮೋನಪ್ಪ ಕೊಯಿಲ ವಂದಿಸಿದರು. ಕವಿಗೋಷ್ಠಿಯಲ್ಲಿ ಹರಿಪ್ರಿಯ ಖಂಡಿಗೆ (ಕನ್ನಡ),ಧನ್ಯಶ್ರೀ ಖಂಡಿಗೆ (ಕನ್ನಡ),ಪ್ರೇಮಚಂದ್ರ ಚೊಂಬಾಲ (ಮಲಯಾಳಂ), ಮಾನಸ ಕೊಡಿಂಕಿರಿ (ತುಳು), ವಿಜಯ ಕಾನ (ಸಂಸ್ಕೃತ),  ಸುಮನಾ ಕರಿಂಬಿಲ (ಕೊಂಕಣಿ), ಅವನಿ ಕರಿಂಬಿಲ (ಹಿಂದಿ), ಯಕ್ಷಿತಾ ಓಜಾಲ (ತುಳು),ಶ್ರುತಿಕಾ ಬಾಕಿಮಾರು,ಕೃಷ್ಣಕಾಂತ ರೈ ಕಳ್ವಾಜೆ(ತುಳು),ಶ್ರೀನಿವಾಸ ನಾಯ್ಕ ಪೆರಿಕ್ಕಾನ (ಮರಾಠಿ), ಶಶಿಕಲಾ ಟೀಚರ್, ಕುಂಬಳೆ (ಇಂಗ್ಲಿಷ್ ), ಜ್ಯೋತ್ಸಾ ಕಡಂದೇಲು (ಕರಾಡ), ಕುಮಾರಿ ಹರ್ಷಿತಾ  (ಇಂಗ್ಲಿಷ್ ) ,ಜನಾರ್ದನ ಬೊಟ್ಟಾರಿ(ಕನ್ನಡ)ಕವನ ವಾಚನಗೈದರು.

Post a Comment

0 Comments

ಜಾಹೀರಾತು

Responsive Advertisement