ಕಾಸರಗೋಡು : ನಗರದ ಪ್ರತಿಷ್ಠಿತ ಚಿನ್ನದ ಮಳಿಗೆಯಾದ ಭೀಮ ಜ್ಯುವೆಲ್ಲರಿ ಸ್ಥಾಪಕರ ದಿನಾಚರಣೆ ಅಂಗವಾಗಿ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿಸಲಾಗಿತ್ತು. ಜಿಲ್ಲೆಯ ಹಲವು ಸಂಘ-ಸಂಸ್ಥೆಗಳು ಹಾಗೂ ಅಗತ್ಯವಿರುವವರಿಗೆ ಧನಸಹಾಯ ವಿತರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಞಂಗಾಡ್ ವ್ಯಾಪ್ತಿಯ ನಾಲ್ವರು ಕ್ಯಾನ್ಸರ್ ರೋಗಿಗಳಿಗೆ ಸೇವಾಭಾರತಿ ಕಾಞಂಗಾಡ್ ಹಾಗೂ ನ್ಯೂ ಮಲಬಾರ್ ಪುನರ್ವಸತಿ ಚಾರಿಟೆಬಲ್ ಟ್ರಸ್ಟ್ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಯಿತು. ಬದಿಯಡ್ಕದ ನೀರ್ಚಾಲು ಸಮೀಪ ಇರುವ ಕನ್ಯಪ್ಪಾಡಿಯ ಆಶ್ರಯ ವೃದ್ಧಾಶ್ರಮದ ನಿವಾಸಿಗಳ ಭೇಟಿ ನೀಡಿ ಸಹಾಯ ಕೋರಲಾಯಿತು.
ಈ ಸಂದರ್ಭದಲ್ಲಿ ಭೀಮ ಜ್ಯುವೆಲ್ಲರಿಯ ಶೋರೂಮ್ ಮ್ಯಾನೇಜರ್ ಸರುಣ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಜ್, ಮಾರ್ಕೆಟಿಂಗ್ ಮ್ಯಾನೇಜರ್ ವಿಷ್ಣು, ಫ್ಲೋರ್ ಮ್ಯಾನೇಜರ್ ಜಯಕೃಷ್ಣನ್ ಹಾಗೂ ಸೂಪರ್‌ವೈಸರ್ ಸಬಿನ್ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಭೀಮ ಜ್ಯುವೆಲ್ಲರಿ ಸಂಸ್ಥೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಅಗತ್ಯವಿರುವವರ ನೆರವಿಗೆ ನಿರಂತರವಾಗಿ ಕೈಜೋಡಿಸುತ್ತಿರುವುದಾಗಿ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost
.png)
0 Comments