Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮೀನು ಸಾಗಾಟದ ಲಾರಿಗಳಿಂದ ನೀರು ರಸ್ತೆಗೆ ಸುರಿದರೆ ಡ್ರೈವಿಂಗ್ ಲೈಸೆನ್ಸ್ ರದ್ಧು ; ಕಠಿಣ ಕ್ರಮಕ್ಕೆ ಮುಂದಾದ ಮೋಟಾರ್ ವಾಹನ ಇಲಾಖೆ

ತಿರುವನಂತಪುರ : ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ವೇಳೆ ಮೀನು ಸಾಗಣೆ ವಾಹನಗಳಿಂದ ದುರ್ಗಂಧಯುಕ್ತ ಮೀನು ನೀರು ರಸ್ತೆಗೆ ಹರಿಯುವ ಸಮಸ್ಯೆಗೆ ಕಡಿವಾಣ ಹಾಕಲು ಕೇರಳ ಮೋಟಾರ್ ವಾಹನ ಇಲಾಖೆ (ಎಂವಿಡಿ) ಕಠಿಣ ಕ್ರಮ ಕೈಗೊಂಡಿದೆ.

ಮೀನು ಸಾಗಣೆ ವಾಹನಗಳಿಂದ ಪೈಪ್‌ಗಳ ಮೂಲಕ ಸಾರ್ವಜನಿಕ ರಸ್ತೆಗೆ ಕಲುಷಿತ ನೀರನ್ನು ಹೊರಹಾಕುವ ಚಾಲಕರ ವಿರುದ್ಧ ಡ್ರೈವಿಂಗ್ ಲೈಸೆನ್ಸ್ ಅಮಾನತು ಸೇರಿದಂತೆ ದಂಡಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ, ರಸ್ತೆಯಲ್ಲಿ ಜಾರುವ ಪರಿಸ್ಥಿತಿ ಉಂಟಾಗಿ ವಾಹನ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂದು ಎಂವಿಡಿ ತಿಳಿಸಿದೆ.

ಮೀನು ಸಾಗಣೆ ವಾಹನಗಳಲ್ಲಿನ ಕಲುಷಿತ ನೀರನ್ನು ರಸ್ತೆಗೆ ಹರಿಸದೆ, ವಾಹನದಲ್ಲೇ ಅಳವಡಿಸಿರುವ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ, ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ನಿಗದಿತ ಕೇಂದ್ರಗಳಲ್ಲಿ ಮಾತ್ರ ತೆರವುಗೊಳಿಸಬೇಕು ಎಂದು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial




#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement