ಕಾಾಸರಗೋಡು : ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಾರಿಗೆ ತರುತ್ತಿರುವ ವಿಶೇಷ ಪೋಷಣಾ ಕಾರ್ಯಕ್ರಮವಾದ 'ಗಿಫ್ಟೆಡ್ ಚಿಲ್ಡ್ರನ್ ಪ್ರೋಗ್ರಾಂ' 2026-27ನೇ ಕಾಾಸರಗೋಡು ಶೈಕ್ಷಣಿಕ ಜಿಲ್ಲಾ ಮಟ್ಟದ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲಾಗಿದೆ.
ವಿದ್ಯಾನಗರದ ಸರಕಾರಿ ಅಂಧರ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಾಸರಗೋಡು ಶೈಕ್ಷಣಿಕ ಉಪನಿರ್ದೇಶಕ ರಫೀಕ್ ಪಿ.ವಿ. ಅವರು ಯೋಜನೆಯನ್ನು ಉದ್ಘಾಟಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ಸವಿತಾ ಪಿ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಣ ನಿರ್ದೇಶಕ ನಂದಿಕೇಶನ್ ಎನ್., ಜಿಲ್ಲಾ ಸಂಪನ್ಮೂಲ ಗುಂಪಿನ ಸದಸ್ಯರಾದ ಯತೀಶ್ ಕುಮಾರ್ ರಾಯ್, ಪ್ರಕಾಶ್ ಟಿ., ದಿವ್ಯಗಂಗಾ, ಪ್ರೀತಿ ಪಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಓಮನಾ ಸಿ. ಶುಭ ಹಾರೈಸಿದರು. ಶೈಕ್ಷಣಿಕ ಜಿಲ್ಲಾ ಯೋಜನಾ ಸಂಯೋಜಕ ಮಿನಿಶ್ ಬಾಬು ಯೋಜನೆಯ ವಿವರಣೆ ನೀಡಿದರು. ಸಂಪನ್ಮೂಲ ಸಮಿತಿ ಸಂಚಾಲಕ ಗಿರೀಶ್ ಬಾಬು ಸ್ವಾಗತಿಸಿ, ಡಿ.ಇ.ಒ. ಸಿಬ್ಬಂದಿ ರಮಿತಾ ಎಂ. ವಂದಿಸಿದರು.
ನಂತರ ನಡೆದ ಸಮಾರಂಭದಲ್ಲಿ 'ಗಿಫ್ಟೆಡ್ ಲೈಫ್, ಗಿಫ್ಟೆಡ್ ಫ್ಯೂಚರ್' ಎಂಬ ವಿಷಯದ ಕುರಿತು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಜಿತ್ ಕುಮಾರ್ ಪಿ. ಅವರು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳು, ಅವರ ಪೋಷಕರರು ಮತ್ತು ಶಿಕ್ಷಕರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಏಳನೇ ತರಗತಿಯ ಸಿ.ಎಂ. ಕಿಡ್ಸ್ (ಯು.ಎಸ್.ಎಸ್.) ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ ಅತ್ಯುತ್ತಮ ಸಾಧನೆ ಮಾಡುವ 40 ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಇವರಿಗೆ 8, 9 ಮತ್ತು 10ನೇ ತರಗತಿಗಳಲ್ಲಿ 3 ವರ್ಷಗಳ ಕಾಲ ವಿಶೇಷ ಕಲಿಕಾ ಅನುಭವಗಳನ್ನು ಒದಗಿಸಲಾಗುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಈ ಮಕ್ಕಳಿಗಾಗಿ ಈ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments