Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡು ಜಿಲ್ಲಾ ಮೊಗೇರ ಸಂಘದಿಂದ ಸಮಾಜದ ಪ್ರತಿಭಾನ್ವಿತರಿಗೆ ಅಭಿನಂದನೆ

 

ಕುಂಬಳೆ : ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಕುಂಬಳೆ ವ್ಯಾಪಾರಿ ಭವನ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ ಡಿ ಉದ್ಘಾಟಿಸಿ  ಸಂಘಟನೆ ಯನ್ನು ಬಲಪಡಿಸಬೇಕಿದ್ದರೆ  ಯುವ ತಲೆಮಾರು ಒಗ್ಗಟ್ಟಾಗಬೇಕು ಎಂದು ನುಡಿದರು. ಸಂಘಟನೆಯ ಜಿಲ್ಲಾಧ್ಯಕ್ಷ ನಿಟ್ಟೋಣಿ ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಸುನಂದ ಟೀಚರ್ ಕುಂಬಳೆ, ನಿವೃತ್ತ ಮೆಡಿಕಲ್ ಓಫೀಸರ್ ರಾಮಚಂದ್ರ ಮಾರ್ಪನಡ್ಕ, ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಅಜಕ್ಕೋಡ್, ಜಿಲ್ಲಾ ಸಮಿತಿ ಗೌರವಾಧ್ಯಕ್ಷ ರಾಮಪ್ಪ ಮಂಜೇಶ್ವರ, ಗೌರವ ಸಲಹೆಗಾರ ಕೃಷ್ಣದಾಸ್ ಡಿ, ಜಿಲ್ಲಾ ಸಮಿತಿ ಸದಸ್ಯರಾದ ಚಂದಪ್ಪ ಕಕ್ವೆ, ರವಿ ಕೆ ಬಾಬು ಬಂದ್ಯೋಡು, ಶಂಕರ ಹೊಸಂಗಡಿ, ಜಯಂತ ಮಂಜೇಶ್ವರ, ಜಯಾ ರಾಮಪ್ಪ, ಸುಂದರಿ ಮಾರ್ಪನಡ್ಕ, ಗಿರಿಜಾ, ಪುಷ್ಪ ಬಂದ್ಯೋಡು,  ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಕೇಶವ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ನಾಗೇಶ್, ಪೆರ್ಲ ಎ ಯು ಪಿ ಶಾಲಾ ಅಧ್ಯಾಪಕ ಉದಯ ಸಾರಂಗ್ ಮೊದಲಾದವರು ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭ ಕಳೆದ ಶೈಕ್ಷಣಿಕ ವರ್ಷದಲ್ಲಿ ಯಸ್ ಯಸ್ ಯಲ್ ಸಿ ಹಾಗೂ ಪ್ಲಸ್ ಟುವಿನಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಾದ ಪಯಸ್ವಿನಿ, ಶ್ರೀದೀಪ್ತಿ, ಸ್ವಾತಿ ಕೆ ಶ್ರೇಯ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು,

ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳಲ್ಲಿ ಡಾಕ್ಟರೇಟ್ ಪಡೆದ ಅನುಷಾ ಡಿ, ವಾಣಿಶ್ರೀ ವಿ ಆರ್, ಮನಿಷಾ ಸಿ ಯಚ್ ಇವರನ್ನು ಗೌರವಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಗೋಪಾಲ ಡಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು. ಸುಂದರ ಸುದೆಂಬಳ  ನಿರೂಪಿಸಿದರು.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial




#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement