Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೇರಳ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲಿ 3.72 ಕೋಟಿ ರೂ. ಸಾಲ ವಿತರಣೆ

ಕಾಸರಗೋಡು : ಕೇರಳ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ  ವತಿಯಿಂದ ಕೇರಳ ಸರ್ಕಾರದ 100 ದಿನಗಳ ಕಾರ್ಯಯೋಜನೆಯ ಅಂಗವಾಗಿ ಜಾರಿಗೊಳಿಸಲಾಗುತ್ತಿರುವ ವಿವಿಧ ಕಲ್ಯಾಣ ಯೋಜನೆಗಳ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮ 'ಸಮಗ್ರ - 2026' ಅನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೊಚ್ಚಿಯ ಪಳ್ಳೂರುತ್ತಿಯ ಎಸ್‌.ಎನ್‌. ಸಭಾಂಗಣದಲ್ಲಿ ಉದ್ಘಾಟಿಸಿದರು.

ಸರ್ಕಾರದ ವಿವಿಧ ಇಲಾಖೆಗಳು, ಅಭಿವೃದ್ಧಿ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಕೈಗಾರಿಕಾ ಹಾಗೂ ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಸುಮಾರು 16,000 ಫಲಾನುಭವಿಗಳಿಗೆ 100 ರೂ.ಕೋಟಿ ಸಾಲ ವಿತರಿಸಲಾಯಿತು. ಅಲ್ಲದೆ ಕುಟುಂಬಶ್ರೀ ಸಿಡಿಎಸ್‌ಗಳು ಹಾಗೂ ಎನ್‌ಜಿಒಗಳ ಮೂಲಕ 15,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ರೂ 100 ಕೋಟಿಗೂ ಅಧಿಕ ಸಾಲ ನೀಡಲಾಯಿತು.

ಇದರ ಅಂಗವಾಗಿ ಕಾಸರಗೋಡು ಪುರಸಭೆಯ ಮಹಿಳಾ ಸಭಾಂಗಣದಲ್ಲಿ ನಡೆದ 'ಸಮಗ್ರ - 2026' ಜಿಲ್ಲಾ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಮಧುಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಶಾಹಿನ ಸಲೀಂ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕಚೇರಿ ವತಿಯಿಂದ 3.72 ಕೋಟಿ ರೂ. ಸಾಲವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಕೆಎಸ್‌ಬಿಸಿಡಿಸಿ ಕಾಸರಗೋಡು ವ್ಯವಸ್ಥಾಪಕ ಎನ್‌.ಎಂ. ಮೋಹನನ್ ಸ್ವಾಗತಿಸಿ, ನಿಗಮದ ವಿವಿಧ ಸಾಲ ಯೋಜನೆಗಳು ಹಾಗೂ ಸಾಲ ಮರುಪಾವತಿ ಕುರಿತ ಮಾಹಿತಿ ನೀಡಿದರು. ಕಾಸರಗೋಡು ಪುರಸಭೆ ಸಿಡಿಎಸ್ ಅಧ್ಯಕ್ಷೆ ಆಯಿಷತ್ ಕೂಬ್ರಾ ಹಾಗೂ ಪೈವಳಿಕೆ ಗ್ರಾಮ ಪಂಚಾಯಿತಿ ಸಿಡಿಎಸ್ ಅಧ್ಯಕ್ಷೆ ಸುಜಾತ ಬಿ. ರೈ ಶುಭಾಶಂಸನೆಗೈದರು. ಕೆಎಸ್‌ಬಿಸಿಡಿಸಿ ಕಾಸರಗೋಡು ಪ್ರಾಜೆಕ್ಟ್ ಅಸಿಸ್ಟೆಂಟ್ ಇರ್ಷಾದ್ ಕೆ.ಕೆ. ಅವರು ನಿಗಮದ ವಿವಿಧ ಸಾಲ ಯೋಜನೆಗಳ ಕುರಿತು ವಿವರಿಸಿದರು.


*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement