ತಿರುವನಂತಪುರ : ಬದಿಯಡ್ಕ ಗ್ರಾಮ ಪಂಚಾಯತು ಕಚೇರಿಯಲ್ಲಿ ಖಾಲಿ ಬಿದ್ದಿರುವ ಅಸಿಸ್ಟೆಂಟ್ ಇಂಜಿನಿಯರ್, ಓವರ್ಸೀಯರ್ ಹುದ್ದೆಗಳಿಗೆ ಕೂಡಲೇ ನೇಮಕಾತಿ ನಡೆಸಬೇಕೆಂದು ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ ಸ್ಥಳೀಯಾಡಳಿತ ಸಚಿವ ಕೆ.ಎಂ.ಶಾಜಿ ಅವರನ್ನು ವಿನಂತಿಸಿದರು. ತಿರುವನಂತಪುರ ಸೆಕ್ರೆಟರಿಯೇಟ್ ನಲ್ಲಿ ಸಚಿವರ ಕಚೇರಿಯಲ್ಲಿ ಸಚಿವರನ್ನು ಬೇಟಿಯಾಗಿ ಅವರು ಮನವಿ ಸಲ್ಲಿಸಿದರು. ಇಂಜಿನಿಯರ್, ಓವರ್ಸೀಯರ್ ಮೊದಲಾದ ಹುದ್ದೆಗಳು ಖಾಲಿ ಬಿದ್ದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಕಟ್ಟಡದ ನಂಬ್ರ, ಪರ್ಮಿಟ್, ವಾರ್ಷಿಕ ಯೋಜನೆಯ ಕೆಲಸಗಳು ಸಹ ವಿಳಂಬವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೇಮಕಾತಿ ನಡೆಸಬೇಕು ಎಂದವರು ಒತ್ತಾಯಿಸಿದರು. ಈ ಬಗ್ಗೆ ಕೂಡಲೇ ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

0 Comments