ಮುಳ್ಳೇರಿಯ : ಕುಂಟಾರು ಎಯುಪಿ ಶಾಲಾ ನಿವೃತ್ತ ಶಿಕ್ಷಕ ಕುಂಟಾರು ನಿವಾಸಿ ವೀರೋಜಿ ರಾವ್ (90) ನಿಧನರಾದರು. ಬಾಲ್ಯ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅನುಭವವನ್ನು ಹೊಂದಿದ್ದ ಇವರು ಭಾರತದ ತುರ್ತು ಪರಿಸ್ಥಿತಿಯ ಹೊರಾಟದಲ್ಲಿಯೂ ಭಾಗವಹಿಸಿದ್ದರು. ಆಗಿನ ಅವಿಸ್ಮರಣೀಯ ಅನುಭವಗಳನ್ನು ತೆರೆದಿಡುತ್ತಿದ್ದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ನಿವೃತ್ತ ಜೀವನದ ಬಳಿಕ ಕೃಷಿ ಕಾಯಕದಲ್ಲೂ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ಪ್ರವೀಣ್ ಕುಮಾರ್, ಯಶ್ವಂತ್ ಕುಮಾರ್, ಕಿಶೋರ್ ಕುಮಾರ್, ಸೊಸೆಯಂದಿರಾದ ಗೀತಾ, ಯಶೋದಾ, ನವ್ಯಾ ಕುಮಾರಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments