ಕೊಚ್ಚಿ : ಸಿನಿಮಾ ಕ್ಷೇತ್ರದವರಿಗೂ ವೈದ್ಯರಿಗೂ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದ ಜಾಲವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. 'ಆಪರೇಷನ್ ತೂಫಾನ್' ಕಾರ್ಯಾಚರಣೆಯ ಭಾಗವಾಗಿ ನಡೆಸಿದ ದಾಳಿಯಲ್ಲಿ ಅಮಲ್ ಜಾರ್ಜ್ ಮತ್ತು ಅಭಿಜಿತ್ ಎಂಬವರನ್ನು ಡ್ಯಾನ್‌ಸಾಫ್ (DANSAF) ಅಧಿಕಾರಿಗಳು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಜಾಲವು ಸಾಮಾನ್ಯ ಗ್ರಾಹಕರಿಗಿಂತ ಶ್ರೀಮಂತ 'ಪ್ರೀಮಿಯಂ' ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಪೂರೈಸುತ್ತಿತ್ತು. ಚೇರನೆಲ್ಲೂರಿನಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಂದಲೇ ಡ್ರಗ್ಸ್ ಮಾರಾಟ ನಡೆಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತ ಅಮಲ್ ಜಾರ್ಜ್ ಈ ಹಿಂದೆಯೂ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಆಗ ಆತನಿಂದ 250 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿತ್ತು. ಈ ಜಾಲದ ಹಣಕಾಸು ವ್ಯವಹಾರಗಳು ಅಭಿಜಿತ್‌ನ ಬ್ಯಾಂಕ್ ಖಾತೆಯ ಮೂಲಕ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

0 Comments