ತಿರುವನಂತಪುರ : ಕೇರಳ ಪೊಲೀಸ್ ಇಲಾಖೆಯಲ್ಲಿ ಭಾರೀ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ಒಂದೇ ಆದೇಶದಲ್ಲಿ 161 ಡಿವೈಎಸ್‌ಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಭಾಗವಾಗಿ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ.ಇದರಂತೆ ಮೂಸ ವಳ್ಳಿಕ್ಕಾಡನ್ ಕಾಸರಗೋಡು ಕ್ರೈಂ ಬ್ರಾಂಚ್ ಡಿವೈಎಸ್‌ಪಿ, ವಿ.ಕೆ. ವಿಶ್ವಂಭರನ್ ಬೇಕಲ್ ಡಿವೈಎಸ್‌ಪಿ, ಉತ್ತಮ್ ದಾಸ್ ಸ್ಟೇಟ್ ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿ, ಪಿ.ಕೆ. ಮಣಿ ಪಯ್ಯನ್ನೂರು ಡಿವೈಎಸ್‌ಪಿ, ಬೈಜು ಪೌಲೋಸ್ ಆಲುವಾ ಡಿವೈಎಸ್‌ಪಿ, ಪಿ.ಎಂ. ಮನೋಜ್ ನಾದಾಪುರಂ ಡಿವೈಎಸ್‌ಪಿ, ಎನ್. ಸುನಿಲ್ ಕುಮಾರ್ ಇಡುಕ್ಕಿ ಕ್ರೈಂ ಬ್ರಾಂಚ್ ಡಿವೈಎಸ್‌ಪಿ ಆಗಿ ಆದೇಶಿಸಲಾಗಿದೆ.
ಈ ವರ್ಗಾವಣೆ ಆದೇಶದ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ವಿಶೇಷ ಘಟಕಗಳಲ್ಲಿ ಪೊಲೀಸ್ ಅಧಿಕಾರಿಗಳ ಜವಾಬ್ದಾರಿಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments