ಬದಿಯಡ್ಕ : ತುಳುನಾಡಿನ ಆಟಿ ಮಾಸದ ಸಂಪ್ರದಾಯದಂತೆ ವಾಂತಿಚ್ಚಾಲಿನ ಲಕ್ಷ್ಮಿ ನಿಲಯದಲ್ಲಿ ಕಳೆದ 58 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ 'ಆಟಿಡೊಂಜಿ ದಿನ' ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ಅವರ ನೇತೃತ್ವದಲ್ಲಿ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ವತಿಯಿಂದ 'ಹಿರಿಯರಿಗೆ ಗೌರವ ಕಿರಿಯರಿಗೆ ಪ್ರೋತ್ಸಾಹ' ಎಂಬ ಧ್ಯೇಯ ವಾಕ್ಯದಂತೆ ಮೂವರು ಹಿರಿಯರಾದ ಮಾತೆಯರಿಗೆ ಗೌರವಾರ್ಪಣೆ ನಡೆಯಿತು. ಕಮಲ ಪೆರುವಾಯಿ, ನೀಲಮ್ಮ ಕೋರ್ಮಂಡ, ಸುಂದರಿ ಪರಪ್ಪು ಎಂಬವರನ್ನು ಗೌರವಿಸಲಾಯಿತು.
ಈ ಸಂದರ್ಭ ಚೆನ್ನಿಕುಡಾಲು ತರವಾಡಿನ ಶ್ರೀಮಲರಾಯಿ ದೈವಸ್ಥಾನದ ಹಿರಿಯರಾದ ಮಂಜಪ್ಪ ಮೂಲ್ಯ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಚೆನ್ನಪ್ಪ ಎರುಗಲ್ಲು ಅಧ್ಯಕ್ಷತೆವಹಿಸಿದ್ದರು. ಬಾಬು ಕುಲಾಲ್ ಬಿ.ಸಿ. ರೋಡು, ನಾರಾಯಣ ಕುಲಾಲ್ ಮುಗು, ಈಶ್ವರ ಮೂಲ್ಯ ತೆಂಕಮಜಲು, ಸುಂದರ ಕುಲಾಲ್ ಕಟ್ನಡ್ಕ, ರಾಮ ನಾಯ್ಕ ಕುಂಟಾಲುಮೂಲೆ, ತೇಜ ಕುಮಾರ್ ಪುತ್ತೂರು, ಮುತ್ತಣ್ಣ ಕುಲಾಲ್ ಕುರುಡಪದವು ಉಪಸ್ಥಿತರಿದ್ದರು.
ಈ ಸಂದರ್ಭ ಕೇರಳ ಲೋಕ ಸೇವಾ ಆಯೋಗದ ಶಿಕ್ಷಕರ ಆಯ್ಕೆಯ ಪರೀಕ್ಷೆಯಲ್ಲಿ ದ್ವಿತೀಯ ರಾಂಕಿನೊಂದಿಗೆ ಉದ್ಯೋಗ ಪಡೆದುಕೊಂಡ ಶಶಿಪ್ರಭಾ ಗಣೇಶ್ ಬಾಯಾಡಿ ಅವರನ್ನು ಸನ್ಮಾನಿಸಲಾಯಿತು. ತುಳು ರಂಗಭೂಮಿ ಕಲಾವಿದ, ಚಲನಚಿತ್ರ ನಟ ಯತೀಶ್ ಕೋರ್ಮಂಡ - ಪ್ರೀತಿ ದಂಪತಿಗಳನ್ನು ಗೌರವಿಸಲಾಯಿತು.

0 Comments