Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನಲ್ಲಿ ಬಾಲಗೋಕುಲ ಉತ್ತರ ಕೇರಳ ರಾಜ್ಯ ಸಮ್ಮೇಳನ ಸಮಾರೋಪ

ಕಾಸರಗೋಡು : ಭವಿಷ್ಯದಲ್ಲಿ ಜ್ಞಾನ ಮತ್ತು ತಂತ್ರಜ್ಞಾನವು ಯುವಕರನ್ನು ಸಬಲರನ್ನಾಗಿಸಲಿದೆ ಎಂದು ಕೇಂದ್ರ ಇಂಧನ ಖಾತೆ ಸಚಿವ ಶ್ರೀಪಾದ್ ಯಸ್ತೋ ನಾಯಕ್ ಹೇಳಿದರು. ಕಾಸರಗೋಡು ಚಿನ್ಮಯಾ ತೇಜಸ್ ಸಭಾಂಗಣದಲ್ಲಿ ಜರಗಿದ ಉತ್ತರ ಕೇರಳಂ ರಾಜ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಕಾಸರಗೋಡು ಜಿಲ್ಲೆಯಲ್ಲಿ ಈ ವೇದಿಕೆಯಲ್ಲಿ ನಿಲ್ಲಲು ಸಾಧ್ಯವಾಗುತ್ತಿರುವುದು ನನಗೆ ಬಹಳ ಸಂತಸ  ತಂದಿದೆ. ಸಾಂಸ್ಕೃತಿಕ ವಿಶಿಷ್ಟತೆಯ ಭೂಮಿಯಲ್ಲಿ ವೇದಿಕೆಯನ್ನುಹಂಚಿಕೊಳ್ಳುವುದು ಸಂತೋಷವಾಗಿದೆ.  ಬಾಲಗೋಕುಲ ಉತ್ತರ ಕೇರಳ, ದಿಲ್ಲಿ ಪ್ರದೇಶ, ಕೇರಳ 2 ವಿಭಾಗದ ಎಲ್ಲ ಕಾರ್ಯಕರ್ತರು ಬಾಲಗೋಕುಲ ಚಟುವಟಿಕೆಗಳನ್ನು ಹೆಚ್ಚಿನ ಸಮರ್ಪಣೆ ಮತ್ತು ಬದ್ಧತೆಯಿಂದ ನಡೆಸುತ್ತಿದ್ದಾರೆ. ಈ ಶಕ್ತಿಯುತ ಸ್ಥಳವು  ಇದಕ್ಕೆ ಸಾಕ್ಷಿಯಾಗಿದೆ. ಇದರ ಹಿಂದಿರುವ ಕಾರ್ಯಕರ್ತರ ಸಮರ್ಪಣಾ ಮನೋಭಾವವನ್ನು ಗೌರವಿಸುತ್ತೇನೆ ಎಂದರು. ಪೋಷಕರು ತಮ್ಮ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬುವಂತೆಯೇ, ಬಾಲಗೋಕುಲ ಮಕ್ಕಳಲ್ಲಿ ಜ್ಞಾನ ಮತ್ತು ಉತ್ತಮ ಚಾರಿತ್ಯವನ್ನು ತುಂಬುತ್ತದೆ. ಭಾರತದ ಪ್ರಗತಿಗಾಗಿ, ಯುವಕರನ್ನು ಶಕ್ತಿಯಾಗಿ ಪರಿವರ್ತಿಸ ಬೇಕು. ಬಾಲಗೋಕುಲ ನೀಡುವ ನೈತಿಕ ಮೌಲ್ಯಗಳು ಅನನ್ಯವಾಗಿವೆ ಎಂದರು. ಉತ್ತರ ಕೇರಳ ರಾಜ್ಯ ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭೆ ಸದಸ್ಯ ಸಿ. ಸದಾನಂದನ್ ಮಾಸ್ಟರ್ ಮಾತನಾಡಿ, ಧರ್ಮ ಹಾಗೂ ಅಧರ್ಮದ ಯುದ್ಧದ ನಡುವೆ ನಮ್ಮ ಕಣ್ಣು ತೆರೆಯಬೇಕು.  ನಮ್ಮಲ್ಲಿ ಇದೀಗ ದೇಶೀಯ ಸಂಸ್ಕೃತಿ ದೂರವಾಗುತ್ತಿದೆ. ಕೇರಳದಲ್ಲಿ ದೇಶ ವಿರುದ್ಧವಾದ ಕೆಲಸಗಳಿಗೆ ಸದಾ ಬೆಂಬಲವಿರುತ್ತದೆ. ದೇಶ ವಿರುದ್ಧ ಆಶಯಗಳಿಗೆ ಸದ್ದಿಲ್ಲದೆ ಪ್ರಚಾರ ನಡೆಯುತ್ತಿದೆ. ಇದರ ವಿರುದ್ಧವಾಗಿ ಬೆಳೆದು ಬರುವ ತಲೆಮಾರುಗಳನ್ನು ಸಿದ್ಧಪಡಿಸಬೇಕು. ಸಾಮಾಜಿಕ ಪರಿವರ್ತನೆಯನ್ನು ಈ ಮೂಲಕ ನಾಡಿನ ಹಿರಿಮೆಯನ್ನು ಕಾಪಾಡಲು ಬಾಲಗೋಕುಲಕ್ಕೆ ಸಾಧ್ಯವಾಗುವುದು,'' ಎಂದರು. ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ರಾಷ್ಟ್ರಭಕ್ತಿಯ ಕೇಂದ್ರವಾಗಿ ಕೇರಳವು ಬದಲಾಗಬೇಕು. ಒಳ್ಳೆಯ ಸಮಾಜ ಬದಲಾವಣೆಗೆ, ಮುಂದಿನ ತಲೆ ಮಾರಿಗೆ ನಮ್ಮ ಸಂಸ್ಕಾರವನ್ನು ಉಳಿಸಲು ಇಂತಹ ಅಡಿಪಾಯ ಬಾಲಗೋಕುಲಗಳ ಮೂಲಕ ಹಾಕಬೇಕು ಎಂದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಹರಿಶ್ಚಂದ್ರ ನಾಯಕ್, ಬಾಲಗೋಕುಲ ಉತ್ತರ ಕೇರಳ ಕಾರ್ಯದರ್ಶಿ ಎನ್.ಎಂ. ಸದಾನಂದನ್, ಆರ್.ಪ್ರಸನ್ನ ಕುಮಾರ್ ಮಾತನಾಡಿದರು. ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಪಿ.ಕೆ.ವಿಜಯ ರಾಘವನ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಿ.ವಿ.ಪೊದುವಾಲ್ ಸ್ವಾಗತಿಸಿ, ಪ್ರಧಾನ ಕಾವ್ಯದರ್ಶಿ ರಾಜೇಂದ್ರ ಮವ್ವಾರು ವಂದಿಸಿದರು. ನಂತರ ನಡೆದ ಪ್ರತಿನಿಧಿ ಸಭೆಯಲ್ಲಿ ಪಿ.ಎಂ. ಶ್ರೀಧರನ್ ಮಾಸ್ಟರ್ ನಿರ್ಣಯ ಮಂಡಿಸಿದರು. ಕಣ್ಣನ್, ಯು. ಪ್ರಭಾಕರನ್ ಮಾಸ್ಟರ್ ಮತ್ತು ಎನ್.ಪಿ. ಪ್ರಜಿತ್ ಮಾಸ್ಟರ್ ಮಾತನಾಡಿದರು.

Post a Comment

0 Comments

ಜಾಹೀರಾತು

Responsive Advertisement