Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಂದಡ್ಕ ಸಮೀಪ ಕಾಡಾನೆಗಳ ದಾಳಿ; ಅಡಿಕೆ, ತೆಂಗು, ಬಾಳೆ ಬೆಳೆ ನಾಶ, ರೈತರಲ್ಲಿ ಆತಂಕ

ಕಾಸರಗೋಡು : ಬಂದಡ್ಕ ಸಮೀಪದ ಮಾಣಿಮೂಲೆ ಹಾಗೂ ಶ್ರೀಮಲೆ ಪ್ರದೇಶಗಳಲ್ಲಿ ಮತ್ತೆ ಕಾಡಾನೆಗಳ ಹಾವಳಿ ಕಾಣಿಸಿಕೊಂಡಿದ್ದು, ರೈತರ ಕೃಷಿ ಬೆಳೆಗಳಿಗೆ ಭಾರೀ ಹಾನಿಯಾಗಿದೆ.

ಮಂಗಳವಾರ ರಾತ್ರಿ ಹಾಗೂ ಬುಧವಾರ ಮುಂಜಾನೆ ಶ್ರೀಮಲೆ ಪ್ರದೇಶಕ್ಕೆ ಎರಡು ಕಾಡಾನೆಗಳು ನುಗ್ಗಿ ಕೃಷಿಕ ಜೋಸ್ ವರ್ಕಿ ಅವರ ತೋಟದಲ್ಲಿ ವ್ಯಾಪಕ ಹಾನಿ ಉಂಟುಮಾಡಿವೆ. ತೋಟದಲ್ಲಿದ್ದ ಅಡಿಕೆ, ಬಾಳೆಗಿಡಗಳು ಸೇರಿದಂತೆ ಹಲವು ಬೆಳೆಗಳನ್ನು ಆನೆಗಳು ನಾಶಪಡಿಸಿವೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಗುಂಪು ಕೃಷಿಕರ ಪ್ರಮುಖ ಆದಾಯದ ಮೂಲವಾಗಿರುವ ತೆಂಗು, ಅಡಿಕೆ, ಬಾಳೆ, ಮರಗೆಣಸು ಸೇರಿದಂತೆ ಹಲವು ಬೆಳೆಗಳನ್ನು ಹಾಳು ಮಾಡಿದೆ. ಇದರಿಂದ ಕೃಷಿಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕೃಷಿ ನಷ್ಟದ ಜೊತೆಗೆ ಕಾಡಾನೆಗಳ ಸಂಚಾರದಿಂದ ಸ್ಥಳೀಯ ನಿವಾಸಿಗಳ ಜೀವಕ್ಕೂ ಅಪಾಯ ಎದುರಾಗಿದೆ. ತೋಟಗಳಲ್ಲಿ ಆನೆಗಳ ಹೆಜ್ಜೆ ಗುರುತುಗಳು ಹಾಗೂ ಮಲ ಕಂಡುಬಂದಿದ್ದು, ಕರ್ನಾಟಕದ ಅರಣ್ಯ ಪ್ರದೇಶದಿಂದ ಬಂದ ಆನೆಗಳ ಗುಂಪೇ ಈ ಹಾನಿಗೆ ಕಾರಣವಾಗಿದೆ ಎಂದು ದೃಢೀಕರಿಸಲಾಗಿದೆ 

ಕಾಡಾನೆಗಳ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು, ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಜಾರಿಗೆ ತರಬೇಕು. ಜೊತೆಗೆ, ಬೆಳೆ ಹಾನಿಗೊಳಗಾದ ರೈತರಿಗೆ ಶೀಘ್ರದಲ್ಲೇ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement