ಪೆರ್ಲ: ಆಗೋಸ್ತು 30ರಂದು ಪೆರ್ಲ ವ್ಯಾಪಾರಿ ಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆಯ ಅಂಗವಾಗಿ ಬಿಲ್ಲವ ಕ್ರೀಡೋತ್ಸವ ಆಗೋಸ್ತು 23ರಂದು ಬೆಳಿಗ್ಗೆ 9 ಗಂಟೆಯಿಂದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಕೇರಳ ರಾಜ್ಯ ಕಬಡ್ಡಿ ತಂಡದ ಮಾಜಿ ಕ್ಯಾಪ್ಟನ್ ಗಣೇಶ್ ಕುಂಬಳೆ ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ. ಎಲ್ಲಾ ಬಿಲ್ಲವ ಬಂಧುಗಳು ಬೆಳಿಗ್ಗೆ 8.30ಕ್ಕೆ ಸಭಾಂಗಣದಲ್ಲಿ ಉಪಸ್ಥಿತರಿರಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಮಕ್ಕಳ ಎಲ್‌ಪಿ ವಿಭಾಗದಲ್ಲಿ ಸಂಗೀತ ಕುರ್ಚಿ, ಬಟಾಟೆ ಹೆಕ್ಕುವುದು, ಲಿಂಬೆ ಚಮಚ, ಬಾಟಲಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಯುಪಿ ವಿಭಾಗದಲ್ಲಿ ಸಂಗೀತ ಕುರ್ಚಿ, ಬಲೂನ್ ಒಡೆಯುವುದು, ಬಟಾಟೆ ಹೆಕ್ಕುವುದು ಮತ್ತು ಲಿಂಬೆ ಚಮಚ ಸ್ಪರ್ಧೆಗಳು ನಡೆಯಲಿವೆ. ಹೈಸ್ಕೂಲ್ ವಿಭಾಗದಲ್ಲಿ ಸಂಗೀತ ಕುರ್ಚಿ, ಒಂಟಿಕಾಲಿನ ಓಟ (ಡೊಂಕ), ಲಿಂಬೆ ಚಮಚ ಹಾಗೂ ಸೂಜಿ-ನೂಲು ಓಟ ಆಯೋಜಿಸಲಾಗಿದೆ.
ಸಾರ್ವಜನಿಕರಿಗೆ ಹಗ್ಗ ಜಗ್ಗಾಟ, ಬಸ್‌ಸ್ಟ್ಯಾಂಡ್ ಬ್ಲಾಸ್ಟ್, ಸಂಗೀತ ಕುರ್ಚಿ ಮತ್ತು ಹಣತೆ ಉರಿಸುವ ಸ್ಪರ್ಧೆಗಳು ನಡೆಯಲಿವೆ. ಅಂಗನವಾಡಿ, ಎಲ್‌ಕೆಜಿ ಹಾಗೂ ಯುಕೆಜಿ ಪುಟಾಣಿಗಳಿಗೆ ಚಾಕಲೇಟ್ ಹೆಕ್ಕುವ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧಾಳುಗಳು ಆಗೋಸ್ತು 23ರಂದು ಬೆಳಿಗ್ಗೆ 8.30ರಿಂದ ಸ್ಪರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು. ಹಗ್ಗ ಜಗ್ಗಾಟ ಸ್ಪರ್ಧೆಗೆ ತಂಡಗಳನ್ನು ಸ್ಥಳದಲ್ಲೇ ರಚಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಸಂಚಾಲಕರಾದ ಪೆರ್ಲ ಶ್ರೇಯಸ್ ಟೈಲರ್ಸ್‌ನ ರಾಮಣ್ಣ ಪೂಜಾರಿ ಬಾಂಕಾನ (ಫೋ. 8281342366) ಅವರನ್ನು ಸಂಪರ್ಕಿಸಬಹುದು.

0 Comments