Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಡಿವೈಎಫ್ ಐ ರಾಜ್ಯ ಸಮ್ಮೇಳನದ ಮಿಸಾ ನಾಟಕದ ಒಂದು ಭಾಗವನ್ನು ಮಾತ್ರ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಕ್ಕೆ ರಂಗ ನಟಿ ಚಿನ್ನೂಸ್ ಖೇದ

ತ್ರಿಶೂರ್: ಡಿವೈಎಫ್ ಐ ರಾಜ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶಿಸಲಾದ 'ಮಿಸಾ' ನಾಟಕದ ನಾಟಕದ ಒಂದು ಭಾಗವನ್ನು ಮಾತ್ರ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಸ್ವತಃ ಅದರ ನಟಿಯೇ ಪ್ರತಿಕ್ರಿಯಿಸಿದ್ದು

ನಾಟಕವನ್ನು ತಪ್ಪು ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಅಪಪ್ರಚಾರಕ್ಕೆ ರಂಗ ಕಲಾವಿದೆ ಚಿನ್ನೂಸ್ ಕೆಲಂಕ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

ತುರ್ತು ಪರಿಸ್ಥಿತಿಯಿಂದ ಆರಂಭಿಸಿ ಫ್ಯಾಸಿಸಂ ಹಾಗೂ ಆಡಳಿತ ವ್ಯವಸ್ಥೆಯ ದೌರ್ಜನ್ಯಗಳ ಕುರಿತು ಪರಿಣಾಮಕಾರಿ ಸನ್ನಿವೇಶಗಳನ್ನು ಪ್ರದರ್ಶಿಸಲಾಗಿದೆ.

ಆಡಳಿತ ವ್ಯವಸ್ಥೆಯ ದೌರ್ಜನ್ಯ ಮತ್ತು ಭಯೋತ್ಪಾದನೆಯ ಕುರಿತು ಈ ನಾಟಕ ಮಾತನಾಡುತ್ತದೆ. ಯಾರು ಎಷ್ಟೇ ಕೆಣಕಿದರೂ ನಾಟಕವನ್ನು ಇನ್ನಷ್ಟು ಬಲವಾಗಿ ಮು೦ದುವರಿಸುತ್ತೇವೆ ಎ೦ದು ಚಿನ್ನೂಸ್ ಕೆಲಂಕ ಹೇಳಿದ್ದಾರೆ.

"ಮಿಸಾ ಯಾರನ್ನು ನೋಯಿಸಬೇಕಿತ್ತೋ, ನಾಟಕ ಯಾರನ್ನು ಕಳವಳಗೊಳಿಸಬೇಕಿತ್ತೋ, ಅವರಿಗೆ ಅದು ಸರಿಯಾಗಿಯೇ ತಟ್ಟಿದೆ ಎಂಬುದು ನಡೆಯುತ್ತಿರುವ ಅಪಪ್ರಚಾರದಿಂದ ಸ್ಪಷ್ಟವಾಗಿದೆ" ಎಂದು ಅವರು ಹೇಳಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement