Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

10 ಸಾವಿರ ದಾಟಿದ ಆಪರೇಷನ್ ತೂಫಾನ್’ ಬಂಧನ : ಅತೀ ಕಡಿಮೆ ಪ್ರಕರಣ ಕಾಸರಗೋಡಿನಲ್ಲಿ; ಎರ್ನಾಕುಳಂನಲ್ಲಿ ಅತಿ ಹೆಚ್ಚು

ಕೊಚ್ಚಿ : ಮಾದಕವಸ್ತುಗಳ ವಿರುದ್ಧ ಪೊಲೀಸರು ನಡೆಸುತ್ತಿರುವ ‘ಆಪರೇಷನ್ ತೂಫಾನ್’ ಕಾರ್ಯಾಚರಣೆ 78 ದಿನಗಳನ್ನು ಪೂರೈಸಿದ್ದು, ಈವರೆಗೆ ಬಂಧಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಕಾರ್ಯಾಚರಣೆಯಲ್ಲಿ 1,004 ಕೆ.ಜಿ. ಗಾಂಜಾ ಹಾಗೂ 8.28 ಕೆ.ಜಿ. ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ.

ಅತಿ ಹೆಚ್ಚು ಬಂಧನಗಳು ಎರ್ನಾಕುಳಂ ಜಿಲ್ಲೆಯಲ್ಲಿ ದಾಖಲಾಗಿವೆ. ಇಲ್ಲಿ 1,393 ಮಂದಿಯನ್ನು ಬಂಧಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಕೋಝಿಕ್ಕೋಡು 1,373, ಮಲಪ್ಪುರಂ 999, ತಿರುವನಂತಪುರಂನಲ್ಲಿ 894 ಹಾಗೂ ಕೊಲ್ಲಂನಲ್ಲಿ 846 ಬಂಧನಗಳು ದಾಖಲಾಗಿವೆ. ಅತಿ ಕಡಿಮೆ ಬಂಧನ ಕಾಸರಗೋಡಿನಲ್ಲಿ ದಾಖಲಾಗಿದ್ದು, 197 ಪ್ರಕರಣಗಳಲ್ಲಿ 229 ಮಂದಿಯನ್ನು ಬಂಧಿಸಲಾಗಿದೆ.

ಕೇರಳಕ್ಕೆ ಹೆಚ್ಚಿನ ಪ್ರಮಾಣದ ಎಂಡಿಎಂಎ ಬೆಂಗಳೂರು, ದೆಹಲಿ ಹಾಗೂ ಗೋವಾ ಭಾಗಗಳಿಂದ ಬರುತ್ತಿದೆ. ಆದರೆ ಈ ಪ್ರಕರಣಗಳಲ್ಲಿ ಏಜೆಂಟ್‌ಗಳು ಹಾಗೂ ಸಣ್ಣ ಪ್ರಮಾಣದಲ್ಲಿ ಮಾದಕವಸ್ತು ಮಾರಾಟ ಮಾಡುವವರನ್ನೇ ಹೆಚ್ಚಾಗಿ ಬಂಧಿಸಲು ಪೊಲೀಸರಿಗೆ ಸಾಧ್ಯವಾಗುತ್ತಿದೆ. ಇತರ ರಾಜ್ಯಗಳಿಗೆ ತೆರಳಿ ತನಿಖೆ ನಡೆಸುವ ಪೊಲೀಸರ ಮಿತಿಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ಕೊರತೆ ದೊಡ್ಡ ಮಾದಕವಸ್ತು ಜಾಲಗಳಿಗೆ ಅನುಕೂಲವಾಗುತ್ತಿದೆ.

ಮಾದಕವಸ್ತುಗಳ ಮೂಲವನ್ನು ಪತ್ತೆಹಚ್ಚಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳುತ್ತಿದ್ದರೂ, ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಇತರ ರಾಜ್ಯಗಳಿಗೆ ತೆರಳಿ ನಡೆಸುವ ತನಿಖೆ ಪರಿಣಾಮಕಾರಿಯಾಗುತ್ತಿಲ್ಲ.

ಕೇರಳಕ್ಕೆ ಹೆಚ್ಚಿನ ಪ್ರಮಾಣದ ಗಾಂಜಾ ಒಡಿಶಾದಿಂದ ಬರುತ್ತಿದೆ. ಒಡಿಶಾದ ಆರು ಜಿಲ್ಲೆಗಳನ್ನು ಕೇಂದ್ರವಾಗಿಸಿಕೊಂಡು ವ್ಯಾಪಕವಾಗಿ ಗಾಂಜಾ ಕೃಷಿ ನಡೆಯುತ್ತಿದ್ದು, ಮಧ್ಯವರ್ತಿಗಳ ಮೂಲಕ ಅದು ಕೇರಳಕ್ಕೂ ತಲುಪುತ್ತಿದೆ. ಅಂತರರಾಜ್ಯ ಸಂಪರ್ಕ ಹೊಂದಿರುವ ದೊಡ್ಡ ಮಾದಕವಸ್ತು ಜಾಲವನ್ನು ಸಂಪೂರ್ಣವಾಗಿ ಪತ್ತೆಹಚ್ಚಲು ವಿಶೇಷ ತನಿಖಾ ತಂಡದ ಅಗತ್ಯವಿದೆ.

ಬಂಧನವಾದ ಬಳಿಕ ಸುಲಭವಾಗಿ ಜಾಮೀನು ಲಭಿಸು ರೀತಿಯ ದಂಧೆಯಾಗಿದೆ ಇದೀಗ ನಡೆಯುತ್ತಿರುವುದು.  ಗಾಂಜಾದಲ್ಲಿ ಒಂದು ಕೆ.ಜಿ.ಯವರೆಗೆ ಸಣ್ಣ ಪ್ರಮಾಣವೆಂದು ಪರಿಗಣಿಸಲಾಗುತ್ತದೆ. ಕೊಕೇನ್‌ನಲ್ಲಿ ಎರಡು ಗ್ರಾಂ ಸಣ್ಣ ಪ್ರಮಾಣವಾಗಿದ್ದು, 10 ಗ್ರಾಂ ವಾಣಿಜ್ಯ ಪ್ರಮಾಣವಾಗಿದೆ.

ಸಣ್ಣ ಪ್ರಮಾಣದ ಮಾದಕವಸ್ತುಗಳೊಂದಿಗೆ ಬಂಧಿತರಾದವರು ಮತ್ತೆ ಮತ್ತೆ ಇಂತಹ ಪ್ರಕರಣಗಳಲ್ಲಿ ಸಿಲುಕುತ್ತಿರುವುದೂ ಸಾಮಾನ್ಯವಾಗಿದೆ.

‘ಆಪರೇಷನ್ ತೂಫಾನ್’ ಕಾರ್ಯಾಚರಣೆಯಲ್ಲಿ ಬಂಧನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜೈಲುಗಳ ಮೇಲೂ ಒತ್ತಡ ಹೆಚ್ಚಾಗಿದೆ. ಬಹುತೇಕ ಉಪಕಾರಾಗೃಹಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಶೇಕಡಾ 30ರಷ್ಟು ಹೆಚ್ಚು ಕೈದಿಗಳಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

Post a Comment

0 Comments

ಜಾಹೀರಾತು

Responsive Advertisement