ಕಾಸರಗೋಡು: ಸ್ವಚ್ಛತಾ ಮಿಷನ್‌ನ ‘ಹರಿತ ಓಣಂ’ ಸಂದೇಶದೊಂದಿಗೆ ಆಯೋಜಿಸಲಾದ ಮಾವೇಲಿ ಯಾತ್ರೆಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಯಾತ್ರೆಗೆ ಫ್ಲ್ಯಾಗ್ ಆಫ್ ಮಾಡಿದರು. ಯಾತ್ರೆಯು ಸಂಜೆ ಚೆರುವತ್ತೂರಿನಲ್ಲಿ ಸಮಾಪ್ತಿಗೊಳ್ಳಲಿದೆ.
ಯಾತ್ರೆಯ ಸಂದರ್ಭದಲ್ಲಿ ಕಲೆಕ್ಟರೇಟ್, ಸಿವಿಲ್ ಸ್ಟೇಷನ್‌ನ ವಿವಿಧ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸಂಸ್ಥೆಗಳು ಹಾಗೂ ಪಟ್ಟಣ ಪ್ರದೇಶಗಳಿಗೆ ಭೇಟಿ ನೀಡಿ ಹರಿತ ಓಣಂ ಮತ್ತು ಸ್ವಚ್ಛತೆಯ ಸಂದೇಶವನ್ನು ಸಾರಲಾಯಿತು.

0 Comments