Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನ ಮೂರು ನದಿಗಳಲ್ಲಿ ನಿಯಂತ್ರಿತ ಮರಳು ಗಣಿಗಾರಿಕೆಗೆ ಸರ್ಕಾರದ ಅನುಮತಿ

 

ಕಾಸರಗೋಡು : ನದಿಗಳಲ್ಲಿ ಸಂಗ್ರಹವಾಗಿರುವ ಮರಳನ್ನು ನಿಯಂತ್ರಿತ ಪ್ರಮಾಣದಲ್ಲಿ ತೆರವುಗೊಳಿಸಲು ಕಂದಾಯ ಇಲಾಖೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯ ಚಂದ್ರಗಿರಿ, ಉಪ್ಪಳ ಹಾಗೂ ಮೊಗ್ರಾಲ್ ನದಿಗಳು ಸೇರ್ಪಡೆಯಾಗಿವೆ.

ಚಂದ್ರಗಿರಿ ಮತ್ತು ಉಪ್ಪಳ ನದಿಗಳಿಂದ ನದಿ ಮರಳು ಹಾಗೂ ಮೊಗ್ರಾಲ್ ನದಿಯಿಂದ ಜಲ್ಲಿ ಕಲ್ಲು (ಗ್ರಾವೆಲ್) ತೆಗೆಯಲು ಅನುಮತಿ ನೀಡಲಾಗುವುದು. ಮರಳು ಆಡಿಟ್ ಅಧ್ಯಯನದ ಪ್ರಕಾರ ಚಂದ್ರಗಿರಿ ನದಿಯಲ್ಲಿ 1.17 ಲಕ್ಷ ಘನ ಮೀಟರ್ ಮರಳು ಸಂಗ್ರಹವಿದ್ದು, 20,019.24 ಘನ ಮೀಟರ್ ತೆರವುಗೊಳಿಸಬಹುದು. ಉಪ್ಪಳ ನದಿಯಲ್ಲಿ 7.82 ಲಕ್ಷ ಘನ ಮೀಟರ್ ಸಂಗ್ರಹವಿದ್ದು, 96,751 ಘನ ಮೀಟರ್ ಮರಳು ತೆಗೆಯಲು ಸಾಧ್ಯವೆಂದು ಗುರುತಿಸಲಾಗಿದೆ.

ಅತಿಯಾದ ಮರಳು ಸಂಗ್ರಹದಿಂದ ನದಿಗಳ ಸಹಜ ಹರಿವಿಗೆ ಅಡ್ಡಿಯಾಗುತ್ತಿದ್ದು, ಪ್ರವಾಹದ ಅಪಾಯ ಹೆಚ್ಚುತ್ತಿದೆ ಎಂದು ಅಧ್ಯಯನ ತಿಳಿಸಿದೆ. ಪರಿಸರ ಹಾಗೂ ಭೂವಿಜ್ಞಾನ ಇಲಾಖೆಗಳ ಅನುಮತಿ ಪಡೆದ ಬಳಿಕ ಡಿಸೆಂಬರ್ ವೇಳೆಗೆ ಮರಳು ತೆರವು ಕಾರ್ಯ ಆರಂಭಿಸುವ ಸಾಧ್ಯತೆಯಿದೆ.

ಪಟ್ಟಿಯಲ್ಲಿ ಸೇರ್ಪಡೆಯಾಗದ ಇತರ ನದಿಗಳಲ್ಲೂ ಮರಳು ಆಡಿಟ್ ನಡೆಯುತ್ತಿದ್ದು, ಮುಂದಿನ ಹಂತದಲ್ಲಿ ನೀಲೇಶ್ವರ, ಕಾರ್ಯಾಂಕೋಡ್ ಹಾಗೂ ಚೈತ್ರವಾಹಿನಿ ನದಿಗಳನ್ನೂ ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಮರಳು ಲಭ್ಯತೆ ಹೆಚ್ಚಾದರೆ ಮರಳು ಹಾಗೂ ಜಲ್ಲಿ ಪುಡಿಯ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.


Post a Comment

0 Comments

ಜಾಹೀರಾತು

Responsive Advertisement