Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉಪಜಿಲ್ಲಾ ಸಮ್ಮೇಳನ ಹಾಗೂ ದಸರಾ ನಾಡಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ಮಂಜೇಶ್ವರ ಉಪಜಿಲ್ಲಾ ಘಟಕದ ಉಪಜಿಲ್ಲಾ ಸಮ್ಮೇಳನ ಮತ್ತು ದಸರಾ ನಾಡಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಕೇಂದ್ರ ಹಾಗೂ ಉಪಜಿಲ್ಲಾ ಸಮಿತಿ ಅಧ್ಯಕ್ಷರು, ಪ್ರಸ್ತುತ ಟ್ರಸ್ಟಿನ ಸದಸ್ಯರಾದ ಟಿ.ಡಿ. ಸದಾಶಿವ ರಾವ್ ಅವರು ಆಮಂತ್ರಣ ಪತ್ರಿಕೆಯನ್ನು ಉಪಜಿಲ್ಲಾ ಅಧ್ಯಕ್ಷರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ತದನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಸಂಘಟನೆಯು ಸುದೀರ್ಘವಾದ ಹೋರಾಟದ ಮೂಲಕ ಪಕ್ಷಾತೀತವಾಗಿ ಬೆಳೆದು ಬಂದ ಸಂಘಟನೆಯಾಗಿದೆ. ಎಲ್ಲರೂ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು. ಉಪಜಿಲ್ಲಾ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ ಎ., ಕಾರ್ಯದರ್ಶಿ ಜಯಪ್ರಶಾಂತ್ ಪಿ., ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಉಪಸ್ಥಿತರಿದ್ದರು. ಉಪಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಸ್ವಾಗತಿಸಿ, ಉಪಜಿಲ್ಲಾ ಸದಸ್ಯರಾದ ಗುರುರಾಜ್ ಕೆ. ವಂದಿಸಿದರು. ಉಪಜಿಲ್ಲಾ ಸದಸ್ಯರಾದ ಇಸ್ಮಾಯಿಲ್ ಕಾರ್ಯಕ್ರಮವನ್ನು ನಿರೂಪಿಸಿದರು.

ಉಪಜಿಲ್ಲಾ ಸಮಿತಿ ಕೋಶಾಧಿಕಾರಿ ಕಿಶೋರ್ ಕುಮಾರ್ ಯಸ್.ಯನ್., ಜೊತೆ ಕಾರ್ಯದರ್ಶಿ ದಿವಾಕರ ಬಲ್ಲಾಳ್, ಸದಸ್ಯರಾದ ಚಂದ್ರಿಕಾ, ಜಯಂತಿ, ಬಶೀರ್, ನಿಶಿತ್ ಐಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತದನಂತರ ಕಾರ್ಯಕಾರಿ ಸಮಿತಿಯ ಸಭೆಯು ನಡೆಯಿತು. ಈ ಸಭೆಯಲ್ಲಿ ಬಿ.ಪಿ.ಸಿ. ನೇಮಕಾತಿ ವಿಚಾರದಲ್ಲಿ ಕನ್ನಡದ ಅಭ್ಯರ್ಥಿಗಳು ಅಪೇಕ್ಷೆ ಸಲ್ಲಿಸಿದ್ದರೂ ಕೂಡ, ಅದನ್ನು ಕಡೆಗಣಿಸಿ ಇತರರಿಗೆ ನೇಮಕಾತಿ ಆದೇಶ ನೀಡಿರುವುದನ್ನು ಖಂಡಿಸಲಾಯಿತು. ಉಪಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ವಿತರಣೆ ಮತ್ತು ಸದಸ್ಯತ್ವ ಅಭಿಯಾನ ಯಶಸ್ವಿಗೆ ರೂಪುರೇಷೆ ನೀಡಲಾಯಿತು.

Post a Comment

0 Comments

ಜಾಹೀರಾತು

Responsive Advertisement