Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಾವಿನ ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕಾಸರಗೋಡು : ಮನೆಯಿಂದ ಹೊರಹೋದ  ವ್ಯಕ್ತಿಯೊಬ್ಬರು ಮನೆಯ ಸಮೀಪದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆರ್ಕಳ ಪಾಡಿಯಲ್ಲಿ ನಡೆದಿದೆ. ಪಾಡಿ ಶ್ರೀನಿಲಯ ನಿವಾಸಿ ಪಿ.ಕೆ. ಕೋರನ್ ವೆಳಿಚ್ಚಪ್ಪಾಡನ್(73) ಮೃತಪಟ್ಟವರು. ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಗೆ ಘಟನೆ ನಡೆದಿದೆ.

‘ಈಗ ಬರುತ್ತೇನೆ’ ಎಂದು ಮನೆಯಿಂದ ಹೊರಟ ಕೋರನ್‌ ಅವರು ಬಹಳ ಸಮಯ ಕಳೆದರೂ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮನೆಯ ಸಮೀಪದ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಮೃತರು ಪತ್ನಿ ಪಿ.ವಿ. ನಾರಾಯಣಿ, ಮಕ್ಕಳಾದ ಟಿ.ಕೆ. ರಾಜೇಶ್, ಟಿ.ಕೆ. ರಾಧಿಕಾ, ಟಿ.ಕೆ. ರತೀಶ್. ಅಳಿಯಂದಿರಾದ ಪ್ರೇಮ (ಚಾಮಕ್ಕೊಚ್ಚಿ), ಸುಧಾಕರನ್ (ನೆಲ್ಕಳ), ಕೆ.ಎಸ್. ಸೀನಾ (ಪಾಡಿ). ಸಹೋದರರಾದ ನಾರಾಯಣನ್ (ಉದುಮ ಪಡಿಂಜಾರ್), ಅನಿತಾ (ಕೊಲತ್ತೂರು) ಎಂಬಿವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement