Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರೈಲಿನಲ್ಲಿ ಹಣ, ಮೊಬೈಲ್ ಕಳವುಗೈದ ಕಾಸರಗೋಡು ನಿವಾಸಿಯ ಬಂಧನ

 


ಕಾಸರಗೋಡು: ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಹಣ ಹಾಗೂ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ ಆರೋಪದ ಮೇಲೆ 63 ವರ್ಷದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಕಾಸರಗೋಡು ಪನ್ನಿಪ್ಪಾರ ಮುಟ್ಟತ್ತೊಡಿ ನಿವಾಸಿ ಅಬ್ದುಲ್ಲ ಕೆ.ಕೆ. (63) ಎಂದು ಗುರುತಿಸಲಾಗಿದೆ.

2026ರ ಆಗಸ್ಟ್ 28ರಂದು ರೈಲು ಸಂಖ್ಯೆ 16345 ನೇತ್ರಾವತಿ ಎಕ್ಸ್‌ಪ್ರೆಸ್ನಲ್ಲಿ ಗೋವಾದ ಕಾನ್ ಕೋನದಿಂದ ಕೋಝಿಕ್ಕೋಡುಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನ 30,000 ರೂ. ನಗದು ಹಾಗೂ ಆತನ ಸ್ನೇಹಿತನ 10,000 ರೂ. ಮೌಲ್ಯದ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿರುವ ಆರೋಪ ಅಬ್ದುಲ್ಲನ ಮೇಲಿದೆ.

ಪ್ರಕರಣದ ತನಿಖೆ ನಡೆಸಿದ ಕೋಝಿಕ್ಕೋಡು ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ಕಾಸರಗೋಡು ರೈಲ್ವೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಜೀವನ್ ಕೆ., ಸಬ್ ಇನ್ಸ್‌ಪೆಕ್ಟರ್ ಸಿ.ಎಸ್. ಸನಿಲ್ ಕುಮಾರ್, ಎಎಸ್‌ಐ ಗಂಗಾಧರನ್, ಸಿವಿಲ್ ಪೊಲೀಸ್ ಅಧಿಕಾರಿ ಸುಶಾಂತ್ ಪಿ. ಹಾಗೂ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಪಿಡಿಎಸ್ ಸ್ಕ್ವಾಡ್‌ನ ಎಎಸ್‌ಐ ಕೆ.ಎಂ. ಶಿಜು, ಹೆಡ್ ಕಾನ್ಸ್‌ಟೇಬಲ್ ಶ್ರೀಕಾಂತ್ ವಿ., ಕಾನ್ಸ್‌ಟೇಬಲ್ ಅಬ್ದುಲ್ ಸತ್ತಾರ್ ಮತ್ತು ಕಾಸರಗೋಡು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಪೋಸ್ಟ್‌ನ ಕಾನ್ಸ್‌ಟೇಬಲ್ ರಾಜೇಶ್ ವಿ.ಟಿ. ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಎಂಟು ಮೊಬೈಲ್ ಫೋನ್‌ಗಳೊಂದಿಗೆ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


Post a Comment

0 Comments

ಜಾಹೀರಾತು

Responsive Advertisement