ಬದಿಯಡ್ಕ: ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲೋಕ್ ಕೃಷಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪೆರುಮುಖ ತಿರುಪತಿ ಕುಮಾರ್ ಭಟ್ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು.
ಪ್ರತಿಭಟನೆಯಲ್ಲಿ ಬ್ಲೋಕ್, ಮಂಡಲ ಹಾಗೂ ಯುವ ಕಾಂಗ್ರೆಸ್ ಸಮಿತಿ ಮುಖಂಡರಾದ ಗಂಗಾಧರ ಗೋಳಿಯಡ್ಕ, ಜಗನ್ನಾಥ ರೈ, ಅಶ್ವತಿ ಅಶೋಕನ್, ಲೀಲಾವತಿ ಕುಂಟಾಲುಮೂಲೆ, ಎಂ. ಅಬ್ಬಾಸ್, ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ, ಶ್ರೀನಾಥ್ ಬದಿಯಡ್ಕ, ಕೃಷ್ಣದಾಸ್ ದರ್ಬೆತ್ತಡ್ಕ, ಲೋಹಿತಾಕ್ಷನ್, ಕೃಷ್ಣ ಕುಮಾರ್, ರವೀಂದ್ರ ಕುಂಟಾಲುಮೂಲೆ, ರಾಮಕೃಷ್ಣನ್, ವಾಮನ ನಾಯ್ಕ್, ಸತೀಶ್ ಪೆರುಮುಂಡ, ಸವಾದ್ ಬಣ್ಪುತ್ತಡ್ಕ, ಮ್ಯಾಥ್ಯೂ, ಬೆಂಜಮಿನ್, ನಿಜೀಷ್, ಗಿರೀಶ್ ಮೊದಲಾದವರು ಭಾಗವಹಿಸಿದ್ದರು.

0 Comments