Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡು ನಗರದಲ್ಲಿ ವ್ಯಾಪಕಗೊಂಡ ಬೈಕ್ ಕಳವು ಪ್ರಕರಣ : ಒಂದೇ ತಿಂಗಳಲ್ಲಿ ಮೂರು ದ್ವಿಚಕ್ರ ವಾಹನಗಳು ನಾಪತ್ತೆ

ಕಾಸರಗೋಡು : ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ವಾಹನಗಳು ಕಳವಾಗಿವೆ. ಇತ್ತೀಚೆಗೆ ಅಕ್ಟೋಬರ್ 4ರಂದು ಹೊಸ ಬಸ್ ನಿಲ್ದಾಣದ ಸಮೀಪದ ಸ್ಮಾರ್ಟ್ ಬಜಾರ್ ಬಳಿ ನಿಲ್ಲಿಸಿದ್ದ ಯುನಿಕಾರ್ನ್ ಬೈಕ್ ಕಳವಾಗಿದೆ. ಚೌಕಿ ನಿವಾಸಿ ಪಿ.ಎ. ರಝಾಕ್ (46) ಅವರಿಗೆ ಸೇರಿದ ಬೈಕ್ ಕಳವಾಗಿದೆ. ರಝಾಕ್ ಅವರು ಸಂಜೆ ಸುಮಾರು 3 ಗಂಟೆಗೆ ಬೈಕ್ ನಿಲ್ಲಿಸಿ ತೆರಳಿದ್ದರು. ರಾತ್ರಿ ಮನೆಗೆ ಮರಳಲು ಬಂದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಕಳವಾದ ಬೈಕ್ ನಗರದಲ್ಲಿ ಎಲ್ಲಾದರೂ ಬಿಟ್ಟು ಹೋಗಿರಬಹುದು ಎಂದು ಭಾವಿಸಿ ದೂರು ನೀಡಲು ತಡ ಮಾಡಿದ್ದಾಗಿ ರಝಾಕ್ ತಿಳಿಸಿದ್ದಾರೆ. ಇದೀಗ ದೂರಿನ ಆಧಾರದಲ್ಲಿ ಕಾಸರಗೋಡು ಟೌನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ತಿಂಗಳ 26ರಂದು ರೈಲ್ವೆ ನಿಲ್ದಾಣದ ಪರಿಸರದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕೂಡ ಕಳವಾಗಿತ್ತು. ನಗರದಲ್ಲಿ ಸರಣಿ ವಾಹನ ಕಳ್ಳತನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

Post a Comment

0 Comments

ಜಾಹೀರಾತು

Responsive Advertisement