ಕುಂಬಳೆ : ಭಾರತೀಯ ಜನತಾ ಪಕ್ಷ, ಕುಂಬಳೆ ಮಂಡಲ ಸಮಿತಿಯ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಶೇಡಿಕಾವಿನ ಶ್ರೀಕೃಷ್ಣ ವಿದ್ಯಾಲಯದಲ್ಲಿ ಚಿತ್ರರಚನೆ ಹಾಗೂ ಭಾಷಣ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಕಲಾಪ್ರತಿಭೆ ಹಾಗೂ ಭಾಷಣ ಕೌಶಲ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಕುಂಬಳೆ ಮಂಡಲ ಅಧ್ಯಕ್ಷ ಬಿ. ವಿಕ್ರಮ್ ಪೈ, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಜಿಲ್ಲಾ ಕಾರ್ಯದರ್ಶಿ ಹಾಗೂ ಚಿತ್ರರಚನೆ ಸ್ಪರ್ಧೆಯ ಜಿಲ್ಲಾ ಸಂಯೋಜಕರಾದ ಪ್ರಮೀಳಾ ಮಜಾಲ್ ಸರಿತಾ ದಿನೇಶ್, ಶ್ರೀಕೃಷ್ಣ ವಿದ್ಯಾಲಯ, ಮಹೇಶ್ ಪುಣಿಯೂರು, ಮಂಡಲ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಮಂಡಲ ಉಪಾಧ್ಯಕ್ಷರು, ಕುಂಬಳೆ ಪಂಚಾಯತ್ ಅಧ್ಯಕ್ಷ ಸುಜಿತ್ ರೈ, ಶಿವಪ್ರಸಾದ್ ರೈ ಮಡ್ವ ಹಾಗು ಪಂಚಾಯತ್ ಸದಸ್ಯರಾದ ಅಮಿತಾ ಆಳ್ವ ಉಪಸ್ಥಿತರಿದ್ದರು.
ಚಿತ್ರರಚನೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಪ್ರೇಮಾ ಶೆಟ್ಟಿ, ಅದಿತಿ ಎಸ್ ರೈ ಹಾಗೂ ಪ್ರಿಯಾಂಕಾ ಪೈ ಭಾಗವಹಿಸಿದರು. ಚಿತ್ರರಚನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರಶೀತ್ ಎಲ್. ಕೆ.,ದ್ವಿತೀಯ ಬಹುಮಾನ ಆಶಿಕ್ ಕೆ. ಗಟ್ಟಿ, ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಧ್ಯಾನ್ ಕೃಷ್ಣ, ದ್ವಿತೀಯ ಬಹುಮಾನ ಆಧ್ಯಾಯನ್ ಗಳಿಸಿಕೊಂಡರು. ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣ ವಿದ್ಯಾಲಯಕ್ಕೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

0 Comments